ಹಸಿವು ಮುಕ್ತ ವಿಶ್ವ: ಪರಿಣಾಮ ಅಧ್ಯಯನ

0
7

ಮಂಗಳೂರು : ವಿಶ್ವ ಹಸಿವು ದಿನದ ಅಂಗವಾಗಿ ‘ಹಸಿವು ಮುಕ್ತ ವಿಶ್ವ’ ಉಪಕ್ರಮದಡಿ ಮಲಬಾರ್ ಗೋಲ್ಡ್ ವತಿಯಿಂದ ‘ರಿಹ್ಯಾಬಿಲಿಟೇಷನ್ ಇಂಪ್ಯಾಕ್ಟ್ ರಿಪೋರ್ಟ್: ಇಂಪ್ಯಾಕ್ಟ್ ಸ್ಟೋರೀಸ್’ ಎಂಬ ಅಧ್ಯಯನ ಕೈಗೊಳ್ಳಲಾಗಿದೆ. ಒಂದು ದೈನಂದಿನ ಊಟ ಹೇಗೆ ಪರಿವರ್ತಿತ ಜೀವನದ ಬಾಗಿಲು ತೆರೆಯುತ್ತದೆ” ಎನ್ನುವುದನ್ನು ಅಧ್ಯಯನ ವರದಿ ಪ್ರಸ್ತುತಪಡಿಸಿದೆ.

ಸ್ಥಳೀಯ ಮಟ್ಟದಲ್ಲಿ ಥನಲ್ ಸಂಸ್ಥೆಯ ಸಹಯೋಗದಲ್ಲಿ ಮಲಬಾರ್ ಸಂಸ್ಥೆ ಹಮ್ಮಿಕೊಂಡಿರುವ ದೈನಂದಿನ ಆಹಾರ ವಿತರಣಾ ಕಾರ್ಯವು ಬೀದಿಗಳಲ್ಲಿ ಬದುಕುತ್ತಿರುವ ಅತೀ ಅಸಹಾಯಕರಿಗೆ ರಕ್ಷಣೆ, ವೈದ್ಯಕೀಯ ನೆರವು, ಆಶ್ರಯ, ಗೌರವಪೂರ್ಣ ಜೀವನ ಪುನಃಸ್ಥಾಪನೆ ಮತ್ತು ಕುಟುಂಬ ಪುನರ್ಮಿಲನಕ್ಕೆ ಹೇಗೆ ದಾರಿಯಾಗಿದೆ ಎಂಬುದನ್ನು ದಾಖಲಿಸಿದೆ ಎಂದು ಮಲಬಾರ್ ಗ್ರೂಪ್ ಅಧ್ಯಕ್ಷ ಎಂ.ಪಿ. ಅಹಮ್ಮದ್ ತಿಳಿಸಿದ್ದಾರೆ.

ಹಸಿವು ಮುಕ್ತ ವಿಶ್ವ ನಿರ್ಮಿಸುವ ನಿಟ್ಟಿನಲ್ಲಿ ಬೀದಿ ಬದಿಯವರಿಗೆ ವಿತರಿಸುತ್ತಿರುವ ಆಹಾರವು ಅವರಲ್ಲಿ ಆತ್ಮವಿಶ್ವಾಸ, ಪುನರ್ವಸತಿ, ಆರೋಗ್ಯ ಸೇವೆಗಳ ಲಭ್ಯತೆ, ಭಾವನಾತ್ಮಕ ಬೆಂಬಲ ಮತ್ತು ಗೌರವಪೂರ್ಣ ಬದುಕಿನ ಪುನಃಸ್ಥಾಪನೆಗೆ ನೆರವಾಗಿರುವುದು ಅಧ್ಯಯನದಿಂದ ದೃಢಪಟ್ಟಿದೆ ಎಂದು ಹೇಳಿದ್ದಾರೆ.

ಒಂದು ಊಟ ಸಾಮಾನ್ಯ ಎನಿಸಬಹುದು; ಆದರೆ ನಿರಂತರವಾಗಿ ಮತ್ತು ಮಾನವೀಯ ಕಾಳಜಿಯೊಂದಿಗೆ ಅದನ್ನು ನೀಡಿದಾಗ ಅಸಹಾಯಕ ಸಮುದಾಯದ ವ್ಯಕ್ತಿಯ ಜೀವನದ ದಿಕ್ಕನ್ನು ಅರ್ಥಪೂರ್ಣವಾಗಿ ಬದಲಾಯಿಸಬಹುದು ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ ಎಂದು ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here