ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿದ್ದ ನರಿಕೊಂಬುವಿನ ಯುವಕನ ಅಕಾಲಿಕವಾಗಿ ಮರಣ

0
784

ಬಂಟ್ವಾಳ :ನಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ರವಿ ಸಫಲ್ಯ ರ ಮಗ ಶ್ರೀ ರಜತ್ (25)ಎಂಬುವವರು ಉದ್ಯೋಗ ನಿಮಿತ್ತ ದಕ್ಷಿಣ ಆಫ್ರಿಕಾ ದೇಶಕ್ಕೆ ತೆರಳಿದ್ದು ಅಲ್ಲಿ ದಿನಾಂಕ 5-4-2025 ರಂದು ಅಕಾಲಿಕವಾಗಿ ಮರಣ ಹೊಂದಿದ್ದು ದಕ್ಷಿಣ ಆಫ್ರಿಕಾದಿಂದ ರಜತ್ ಮೃತ ದೇಹವನ್ನು ಇವತ್ತು ಊರಿಗೆ ತಂದು ನರಿಕೊಂಬು ಗ್ರಾಮದ ನಾಯಿಲ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಮೃತರು ತಂದೆ, ತಾಯಿ, ಹಾಗೂ ಅಪಾರ ಬಂಧು ಮಿತ್ರಗಳನ್ನು ಅಗಲಿದ್ದಾರೆ.

ಮೃತ ಶರೀರವನ್ನು ಊರಿಗೆ ತರಲು ವಿದೇಶಾಂಗ ಇಲಾಖೆ ಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಮಾಡಿ ಸಹಕರಿಸಿದ ಸಂಸದರಾದ ಬ್ರಿಜೇಶ್ ಚೌಟ, ಹಾಗು ಸಹಕರಿಸಿದ ಬಂಟ್ವಾಳ ಕ್ಷೇತ್ರ ಶಾಸಕರಾದ ರಾಜೇಶ್ ನಾಯ್ಕ್.ಬಿಜೆಪಿ ಕ್ಷೇತ್ರ ಅಧ್ಯಕ್ಷರಾದ ಚೆನ್ನಪ್ಪ ಕೋಟ್ಯಾನ್. ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಪುರುಷೋತ್ತಮ ಸಾಲಿಯಾನ್ .ದಿನೇಶ್ ಅಮ್ಟೂರ್,ಉದಯ ಕುಮಾರ್ ಶೆಟ್ಟಿ, ಪ್ರೇಮನಾಥ್ ಶೆಟ್ಟಿ ಅಂತರ, ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರುಗಳು  ಸಹಕರಿಸಿದರು

LEAVE A REPLY

Please enter your comment!
Please enter your name here