ಮಂಗಳೂರು: ಕೋಡಿಕಲ್‌ನಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಮೃತಪಟ್ಟ ಯುವಕ ಕೋಡಿಕಲ್ ನಿವಾಸಿ ನಿಖಿಲ್ ಪೂಜಾರಿ (30) ಎಂದು ತಿಳಿಯಲಾಗಿದೆ. ಬೆಳಗ್ಗೆ ಯುವಕ ಮನೆಯಲ್ಲಿ ತಿಂಡಿ ಸೇವಿಸಿ ಕೋಣೆಗೆ ಹೋಗಿದ್ದ. ಈತ ಸಂಜೆ ಮಲಗುವ ಅಭ್ಯಾಸ ಹೊಂದಿದ್ದ. ಈ ಹಿನ್ನೆಲೆ ಮನೆಯವರು ಆತನ ಬಗ್ಗೆ ಹೆಚ್ಚಿನ ಗಮನ ಹರಿಸಿರಲಿಲ್ಲ. ಸಂಜೆಯಾದರೂ ಬಾರದ ಹಿನ್ನೆಲೆ ಮನೆಯವರು ಬಾಗಿಲು ಬಡಿದರೂ, ಕರೆದರೂ ಆತನಿಂದ ಪ್ರತಿಕ್ರಿಯೆ ಬಂದಿರಲಿಲ್ಲ. ನಂತರ ರಾತ್ರಿ 8.15ರ ವೇಳೆಗೆ ಬಾಗಿಲಿನ ಎಡೆಯಿಂದ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.
ಪ್ರಾಥಮಿಕ ತನಿಖೆಯಿಂದ ಸಾಲದ ಹೊರೆಯಿಂದ ಮೃತಪಟ್ಟಿರುವ ಬಗ್ಗೆ ತಿಳಿದು ಬಂದಿದೆ. ಈತ ವಿವಿಧ ಅ್ಯಪ್ ಗಳಲ್ಲಿ ಸಾಲ ಪಡೆದಿದ್ದು, ಹಿಂತಿರುಗಿಸಲು ಸಾಧ್ಯವಾಗದೆ ಆತ್ಮಹತ್ಯೆ ಶರಣಾಗಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.