ಅಜ್ಜಿನಡ್ಕ ವಲಯ ಕಚೇರಿಯಲ್ಲಿ ಅಳಿಕೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಎಲ್ಲಾ ಸದಸ್ಯರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬ್ಯಾಗ್ ವಿತರಣಾ ಸಮಾರಂಭ ನಡೆಯಿತು.
ಯೋಜನಾ ಅಧಿಕಾರಿ ಸುರೇಶ್ ಗೌಡ ಅವರ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಅಳಿಕೆ ವಲಯ ಅಧ್ಯಕ್ಷ ರಾಜೇಂದ್ರ ರೈ ಮಾತನಾಡಿ, ವಿಪತ್ತು ನಿರ್ವಹಣಾ ಕಾರ್ಯದಲ್ಲಿ ಶೌರ್ಯ ಘಟಕದ ಪಾತ್ರ ಮಹತ್ವದ್ದು ಎಂದರು.
ಅಳಿಕೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕಿ ಸರಸ್ವತಿ, ಘಟಕದ ಪ್ರತಿನಿಧಿ ದೀಪಕ್ ಸೇರಿದಂತೆ ಘಟಕದ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಮನೋಭಾವವನ್ನು ಶ್ಲಾಘಿಸಲಾಯಿತು.

