ಬಂಟ್ವಾಳ: ವಕೀಲ ಸಮುದಾಯದ ಘನತೆಗೆ ಕುಂದು ಉಂಟು ಮಾಡುವಂತಹ ಕೀಳು ಮಟ್ಟದ ಶಬ್ದಗಳೊಂದಿಗೆ ಸಂಭೋದಿಸಿ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ನಲ್ಲಿ ಬರೆದಿರುವ ನವೀನ್ ಗೌಡ ಎಂಬಾತನ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ದಾಖಲಾದ ಕೇಸಿನ ವರದಿ ಮಾಧ್ಯಮದಲ್ಲಿ ಪ್ರಸಾರವಾಗಿದ್ದು, ವರದಿನ್ನು ಉಲ್ಲಖಿಸಿ ನವೀನ್ ಗೌಡ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ನಿಂದನ್ಮಾತಕ ಪದಗಳನ್ನು ಬಳಸಿ ಮಾನಹಾನಿಯನ್ನು ಮಾಡಿರುವುದಾಗಿ ವಕೀಲರಾದ ಶಿವಾನಂದ ಎಂ.ವಿ. ಅವರು ಮತ್ತೊಂದು ದೂರು ದಾಖಲಿಸಿದ್ದಾರೆ.