ಮಂಗಳೂರು: ಜೀವನ ಮಟ್ಟದ ಉನ್ನತೀಕರಣಕೆ ಹಣಕಾಸು ಸಾಕ್ಷರತೆ ಬ್ಯಾಂಕಿಂಗ್ ಸೌಲಭ್ಯಗಳ ಅರಿವು ಅತ್ಯಗತ್ಯ – ಶ್ರೀಮತಿ ಲತಾ ಕುರುಪ್ ಡಿಜಿಎಂ ಪ್ರಾದೇಶಿಕ ವ್ಯವಸ್ಥಾಪಕರು ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ ಮಂಗಳೂರು. ಲೀಡ್ ಬ್ಯಾಂಕ್ ಕಛೇರಿ ದಕ್ಷಿಣ ಕನ್ನಡ ಹಾಗೂ ಫೀಶರಿಸ್ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಹಣಕಾಸು ಸಾಕ್ಷರತಾ ಕಾರ್ಯಕ್ರಮವನ್ನು ಕಾಲೇಜು ಆವರಣದಲ್ಲಿ ಆಯೋಜಿಸಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ ಮಂಗಳೂರು ಇಲ್ಲಿನ ಪ್ರಾದೇಶಿಕ ವ್ಯವಸ್ಥಾಪಕಿ ಶ್ರೀಮತಿ ಲತಾ ಕುರುಪು , ಡಿಜಿಎಂ ವಹಿಸಿದ್ದರು.ಕಾರ್ಯಕ್ರಮದಲ್ಲಿ ಕಾಲೇಜು ಡೀನ್ ಶ್ರೀ ಡಾ. ಆಂಜನಪ್ಪ ಹೆಚ್.ಎನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶ್ರೀಮತಿ ಕವಿತಾ ಎನ್ ಶೆಟ್ಟಿ ಮುಖ್ಯ ವ್ಯವಸ್ಥಾಪಕರು ಲೀಡ್ ಬ್ಯಾಂಕ್ ಕಛೇರಿ ದಕ್ಷಿಣ ಕನ್ನಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಸುದೇಶ್ ಶೆಟ್ಟಿ ವ್ಯವಸ್ಥಾಪಕರು ಕೆನರಾ ಬ್ಯಾಂಕ್, ಶ್ರೀ ಲತೇಶ್ ಬಿ ಹಣಕಾಸು ಸಾಕ್ಷರತಾ ಸಮಾಲೋಚಕರು ಕೆನರಾ ಬ್ಯಾಂಕ್ ಅಮೂಲ್ಯ, ಮಂಗಳೂರು.ವಿವಿಧ ಭಾರತ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳು , ಸುರಕ್ಷಿತ ಡಿಜಿಟಲ್ ವ್ಯವಹಾರ, ಕೆನರಾ ಬ್ಯಾಂಕ್ ನಲ್ಲಿ ಲಭ್ಯ ಇರುವ ಅನೇಕ ಸೇವಾ ಸೌಲಭ್ಯಗಳ ಮಾಹಿತಿ ನೀಡಿದರು.ಕಾರ್ಯಕ್ರಮವನ್ನು ಶ್ರೀ ಕುಮಾರ್ ನಾಯಕ್ ಮಾನವ ಸಂಪನ್ಮೂಲ ವಿಭಾಗ ಫೀಶರಿಸ್ ಕಾಲೇಜು ನಿರ್ವಹಿಸಿ, ವಿದ್ಯಾರ್ಥಿನಿ ಕು. ಪ್ರತ್ಯುಶ ನಿರೂಪಿಸಿದರು.

