ಮೂಡುಬಿದಿರೆಯಲ್ಲಿ ನ. 27ರಂದು ಅದಿಯೋಗಿ ಪಲ್ಲಕ್ಕಿ ಉತ್ಸವ

0
12

ಮೂಡುಬಿದಿರೆ : ಕೈಲಾಸ ವಾದ್ಯದ ಜೊತೆಗೆ ಅದಿಯೋಗಿ ಪಲ್ಲಕ್ಕಿ ಉತ್ಸವ ಮೂಡುಬಿದಿರೆಯ ಪೇಟೆಯಲ್ಲಿ ಸಂಚಾರಿಸಲಿದೆ. ನವಂಬರ್ 27ರ ಶುಕ್ರವಾರದಂದು ಸಂಜೆ 4 ಗಂಟೆಗೆ ಕೈಲಾಸ ವಾದ್ಯಂ ಸೇವೆ ಪುತ್ತಿಗೆಯ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಈ ಸೇವಾ ಕಾರ್ಯಕ್ರಮವೂ ಸುಮಾರು 5 ಗಂಟೆಗೆಯವರೆಗೆ ನಡೆಯಲಿದೆ.

ಕೈಲಾಸಂ ವಾದ್ಯ ಸೇವೆಯ ಬಳಿಕ ಅದಿಯೋಗಿ ಪಲ್ಲಕ್ಕಿ ಉತ್ಸವವೂ ಶ್ರೀ ಅದಿಶಕ್ತಿ ಮಾರುಗುಡಿಯಿಂದ ಆರಂಭಗೊಂಡು ಹನುಮಾನ್ ದೇವಸ್ಥಾನ ಬಳಿಕ ಜೈನ್ ದೇವಸ್ಥಾನದ ಮಾರ್ಗದಲ್ಲಿ ಸಾಗಿ ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಸಾಗಲಿದೆ. ಬೆದ್ರ ಸೇವಾ ಪ್ರತಿಷ್ಠಾನ(ರಿ.) ಸಹಯೋಗದೊಂದಿಗೆ ಆನೇಕ ಸಂಘ ಸಂಸ್ಥೆಗಳ ಸಹಕಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮವೂ ಗಣ್ಯರ ಸಮ್ಮುಖದಲ್ಲಿ ಉದ್ಗಾಟನೆಗೊಳ್ಳಲಿದೆ. ಚೌಟರ ಅರಮನೆಯ ಕುಲದೀಪ್ ಎಂ. ಈ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಹಾಗೂ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಜೈನ ಮಠದ ಶ್ರೀ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಸ್ವಾಮಿಜಿಯವರು ಆಶೀರ್ವಚನ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಮಾಜದ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಆನೇಕ ಗಣ್ಯರು ಮುಖ್ಯ ಆತಿಥಿಗಳಾಗಿ ಭಾಗವಹಿಸಲಿದ್ದಾರೆ.