ಆಹಾರ ಸುರಕ್ಷತೆ, ಪೌಷ್ಟಿಕಾಂಶ ಅರಿವಿಗೆ ಒಪ್ಪಂದ

0
4

ಮಂಗಳೂರು: ಗ್ರಾಹಕರಲ್ಲಿ ಅರಿವು ಮೂಡಿಸುವುದು, ಪೌಷ್ಟಿಕಾಂಶ ಶಿಕ್ಷಣ ಉತ್ತೇಜನ ಹಾಗೂ ಆಹಾರ ಸುರಕ್ಷತೆಯಲ್ಲಿ ಸಾಮಥ್ರ್ಯ ವೃದ್ಧಿಗೆ ಸಂಬಂಧಿಸಿದ ಉಪಕ್ರಮಗಳನ್ನು ಬಲಪಡಿಸುವ ಉದ್ದೇಶದಿಂದ ಆಮ್ವೇ ಇಂಡಿಯಾ ಹಾಗೂ ಅಂತಾರಾಷ್ಟ್ರೀಯ ಆಹಾರ ಸುರಕ್ಷತೆ ಮತ್ತು ಅನ್ವಯಿಕ ಪೌಷ್ಟಿಕಾಂಶ ತರಬೇತಿ ಕೇಂದ್ರ (ಐಟಿಸಿಎಫ್‍ಎಸ್‍ಎಎನ್) ಒಡಂಬಡಿಕೆ ಮಾಡಿಕೊಂಡಿವೆ.

ಆಮ್ವೇ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಜನೀಶ್ ಚೋಪ್ರಾ ಹಾಗೂ ಐಟಿಸಿಎಫ್‍ಎಸ್‍ಎಎನ್ ತಾಂತ್ರಿಕ ವಿಭಾಗದ ಉಪನಿರ್ದೇಶಕಿ ವೈದೇಹಿ ಕಲ್ಜುಂಕರ್, ಎಫ್‍ಎಸ್‍ಎಸ್‍ಎಐ ಪ್ರಾದೇಶಿಕ ನಿರ್ದೇಶಕಿ ಪ್ರೀತಿ ಚೌಧರಿಯವರ ಉಪಸ್ಥಿತಿಯಲ್ಲಿ ಈ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು.

ಈ ಸಹಭಾಗಿತ್ವದಡಿ ಗ್ರಾಹಕರು, ವಿದ್ಯಾರ್ಥಿಗಳು, ಆಹಾರ ಉದ್ಯಮದ ವೃತ್ತಿಪರರು ಹಾಗೂ ಇತರ ಸಂಬಂಧಿತ ಪಾಲುದಾರರಿಗಾಗಿ ತಜ್ಞರ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮಗಳು, ಜ್ಞಾನ ವಿನಿಮಯ ಉಪಕ್ರಮಗಳು ಮತ್ತು ಸಾಮಥ್ರ್ಯ ವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಅಲ್ಲದೆ, ಪರಸ್ಪರ ಒಪ್ಪಿಕೊಂಡ ಷರತ್ತುಗಳು ಮತ್ತು ಅಗತ್ಯ ಅನುಮೋದನೆಗಳಿಗೆ ಒಳಪಟ್ಟು, ಸಹಯೋಗದ ಸಂಶೋಧನೆ ಹಾಗೂ ವಿಶ್ಲೇಷಣಾತ್ಮಕ ಅಧ್ಯಯನಗಳನ್ನು ಕೈಗೊಳ್ಳುವ ಅವಕಾಶಗಳನ್ನೂ ಈ ಸಹಭಾಗಿತ್ವ ಒದಗಿಸುತ್ತದೆ.

ಸಂಸ್ಥೆಗಳ ಪರಿಣತಿ ಮತ್ತು ಉದ್ಯಮದ ಪಾಲ್ಗೊಳ್ಳುವಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ವಿಜ್ಞಾನಾಧಾರಿತ ಗ್ರಾಹಕ ಶಿಕ್ಷಣ, ಸೂಕ್ತ ಮಾಹಿತಿಯ ಆಧಾರದ ಮೇಲೆ ಆಹಾರ ಆಯ್ಕೆಗಳನ್ನು ಮಾಡಿಕೊಳ್ಳುವ ಪ್ರಕ್ರಿಯೆ ಹಾಗೂ ಆಹಾರ ಸುರಕ್ಷತೆಯ ಬಲವಾದ ಸಂಸ್ಕøತಿಯನ್ನು ಉತ್ತೇಜಿಸುವುದು ಈ ಸಹಭಾಗಿತ್ವದ ಉದ್ದೇಶವಾಗಿದೆ ಎಂದು ಪ್ರಕಟಣೆ ಹೇಳಿದೆ.