ಎಐಸಿ ನಿಟ್ಟೆ ಇನ್ಕ್ಯುಬೇಷನ್ ಸೆಂಟರ್ ರಾಷ್ಟ್ರೀಯ ಮಟ್ಟದಲ್ಲಿ ಮಿಂಚು : ಮೂವರು ನಾವೀನ್ಯತೆಕಾರರಿಗೆ 2026ರ ಗ್ರಾಸ್‌ರೂಟ್ಸ್ ಇನ್ನೋವೇಟರ್ ಗೌರವ

0
4

ಎಐಸಿ ನಿಟ್ಟೆ ಇನ್ಕ್ಯುಬೇಷನ್ ಸೆಂಟರ್‌ನ ಮೂರು ಸ್ಟಾರ್ಟ್‌ಅಪ್‌ಗಳು ದೇಶದಾದ್ಯಂತ ಆಯ್ಕೆಯಾದ 26 ಸಾಧಕರಲ್ಲಿ ಸ್ಥಾನ ಪಡೆದು ಗ್ರಾಸ್‌ರೂಟ್ಸ್ ಇನ್ನೋವೇಟರ್ ರೆಕಗ್ನಿಷನ್ 2026 ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿ ವಿಜೇತರಾದ ಅಕ್ಷಯ್ ಮಾಶೇಲ್ಕರ್, ಅನುಷಾ ಪ್ರಜ್ವಲ್ ಮತ್ತು ರತ್ನಾಕರ್ ನಾಯಕ್ ಅವರು 2026ರ ಜುಲೈ 31ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಗೌರವ ಸ್ವೀಕರಿಸಲಿದ್ದಾರೆ. ಆಯ್ಕೆಯಾದ ನಾವೀನ್ಯತೆಕಾರರು ಮತ್ತು ಅವರ ಸಂಸ್ಥೆಗಳು ಅಕ್ಷಯ್ ಮಾಶೇಲ್ಕರ್ (ಎಕ್ಸ್‌ಪೆರಿಮೈಂಡ್ ಲ್ಯಾಬ್ಸ್ ಪ್ರೈ. ಲಿ.): ಮಕ್ಕಳಿಗೆ ವಿಜ್ಞಾನ ಮತ್ತು ಗಣಿತವನ್ನು ಸುಲಭವಾಗಿ ಕಲಿಸಲು ಹ್ಯಾಂಡ್ಸ್-ಆನ್ ಸ್ಟೆಮ್ (STEM) ಕಿಟ್‌ಗಳು ಮತ್ತು ಶೈಕ್ಷಣಿಕ ಆಟಿಕೆಗಳನ್ನು ತಯಾರಿಸುತ್ತಿದ್ದಾರೆ.

ಅನುಷಾ ಪ್ರಜ್ವಲ್ (ಮಾವೇದಾಸ್ ಫುಡ್ಸ್ ಆಂಡ್ ಸೀರಿಯಲ್ಸ್ ಪ್ರೈ. ಲಿ.): ಗರ್ಭಿಣಿಯರು, ಬಾಣಂತಿಯರು ಮತ್ತು ಶಿಶುಗಳ ಆರೋಗ್ಯಕ್ಕಾಗಿ ಸಾಂಪ್ರದಾಯಿಕ ಆಯುರ್ವೇದ ಪಾಕವಿಧಾನಗಳನ್ನು ರಾಸಾಯನಿಕ ಮುಕ್ತ ಪೌಷ್ಟಿಕ ಆಹಾರಗಳಾಗಿ ಪರಿವರ್ತಿಸುತ್ತಿದ್ದಾರೆ.

ರತ್ನಾಕರ್ ನಾಯಕ್ (ಡಬ್ಲ್ಯೂ.ಡಬ್ಲ್ಯೂ.ಆರ್ ಇನ್ನೋವೇಶನ್ಸ್ ಪ್ರೈ. ಲಿ.): ರೈತರಿಗಾಗಿ ವೈ-ಫೈ ಅಥವಾ ಸಿಮ್ ಕಾರ್ಡ್ ಇಲ್ಲದೆ ಕೆಲಸ ಮಾಡುವ ‘ಲೋರಾ’ (LoRa) ತಂತ್ರಜ್ಞಾನ ಆಧಾರಿತ ‘ಆತ್ಮಸ್’ (ATMAS) ವೈರ್‌ಲೆಸ್ ವಾಟರ್ ಲೆವೆಲ್ ಕಂಟ್ರೋಲರ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಎಐಸಿ ನಿಟ್ಟೆ ಇನ್ಕ್ಯುಬೇಷನ್ ಸೆಂಟರ್ ಬಗ್ಗೆ ಸ್ಥಳ: ಎನ್‌ಎಮ್‌ಎಎಮ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ, ಕರ್ನಾಟಕ.ಪಾಲುದಾರರು: ನಿಟ್ಟೆ ಎಜುಕೇಶನ್ ಟ್ರಸ್ಟ್, ಅಟಲ್ ಇನ್ನೋವೇಶನ್ ಮಿಷನ್ (AIM), ಮತ್ತು ನೀತಿ ಆಯೋಗ.ಸಾಧನೆ: ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಗ್ರಾಮೀಣ ಜೀವನೋಪಾಯಕ್ಕೆ ಸಂಬಂಧಿಸಿದ 137ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ನೀಡಿದೆ.