ಮೂವರು ಭಾರತೀಯರನ್ನು ಅಪಹರಿಸಿದ ಅಲ್​-ಖೈದಾ ಉಗ್ರರು!

0
60

ಮಾಲಿ: ಪಶ್ಚಿಮ ಆಫ್ರಿಕಾದ ಮಾಲಿ(Mali)ಯಲ್ಲಿ ನಡೆದ ಭಯೋತ್ಪಾದನ ದಾಳಿಯ ಸಂದರ್ಭದಲ್ಲಿ ಅಲ್​​-ಖೈದಾ ಉಗ್ರರು ಮೂವರು ಭಾರತೀಯರನ್ನು ಅಪಹರಿಸಿದ್ದಾರೆ. ಈ ಘಟನೆ ಬಗ್ಗೆ ಭಾರತ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಅವರನ್ನು ಕೂಡಲೇ ರಕ್ಷಣೆ ಮಾಡುವಂತೆ ಮಾಲಿ ಸರ್ಕಾರದ ಬಳಿ ಮನವಿ ಮಾಡಿದೆ. ವಿದೇಶಾಂಗ ಸಚಿವಾಲಯ (MEA) ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಜುಲೈ 1 ರಂದು, ಕೆಲವು ಶಸ್ತ್ರಸಜ್ಜಿತ ದಾಳಿಕೋರರು ಮಾಲಿಯ ಕೇಯ್ಸ್‌ನಲ್ಲಿರುವ ಡೈಮಂಡ್ ಸಿಮೆಂಟ್ ಕಾರ್ಖಾನೆಯ ಮೇಲೆ ದಾಳಿ ಮಾಡಿ ಅಲ್ಲಿ ಕೆಲಸ ಮಾಡುತ್ತಿದ್ದ ಮೂವರು ಭಾರತೀಯ ನಾಗರಿಕರನ್ನು ಅಪಹರಿಸಿದ್ದಾರೆ.

ಮಾಲಿಯಲ್ಲಿ ನಡೆದ ಈ ಅಪಹರಣ ಮತ್ತು ಇತರ ದಾಳಿಗಳ ಹೊಣೆಯನ್ನು ಅಲ್-ಖೈದಾ ಸಂಬಂಧಿತ ಗುಂಪು ಜಮಾತ್ ನುಸ್ರತ್ ಅಲ್-ಇಸ್ಲಾಂ ವಾಲ್ ಮುಸ್ಲಿಮೀನ್ (ಜೆಎನ್‌ಐಎಂ) ಹೊತ್ತುಕೊಂಡಿದೆ. ಮಾಲಿಯ ರಾಜಧಾನಿ ಬಮಾಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸ್ಥಳೀಯ ಆಡಳಿತ, ಕಾನೂನು ಜಾರಿ ಸಂಸ್ಥೆಗಳು ಮತ್ತು ಸಿಮೆಂಟ್ ಕಾರ್ಖಾನೆ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಅಲ್ಲದೆ, ಅಪಹರಣಕ್ಕೊಳಗಾದ ಭಾರತೀಯರ ಕುಟುಂಬಗಳಿಗೂ ಪರಿಸ್ಥಿತಿಯ ಬಗ್ಗೆ ತಿಳಿಸಲಾಗುತ್ತಿದೆ.

ಈ ಘಟನೆಯನ್ನು ‘ಅತ್ಯಂತ ಖಂಡನೀಯ ಹಿಂಸಾಚಾರ’ ಎಂದು ಸರ್ಕಾರ ಕರೆದಿದೆ ಮತ್ತು ಭಾರತೀಯ ಪ್ರಜೆಗಳು ಬೇಗನೆ ಮತ್ತು ಸುರಕ್ಷಿತವಾಗಿ ಮರಳುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುವಂತೆ ಮಾಲಿ ಸರ್ಕಾರಕ್ಕೆ ಮನವಿ ಮಾಡಿದೆ.

LEAVE A REPLY

Please enter your comment!
Please enter your name here