ಹೆಬ್ರಿ : ಬ್ರಹ್ಮಾವರ ವಲಯದ ಹಲುವಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್. ಕೆ. ಜಿ, ಯು. ಕೆ. ಜಿ ಮಕ್ಕಳಿಗೆ ಅಲಯನ್ಸ್ ಕ್ಲಬ್ ಹೆಬ್ರಿ ಮತ್ತು ಲೇಡೀಸ್ ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ವತಿಯಿಂದ ಕೊಡುಗೆಯಾಗಿ ನೀಡಿದ ಬ್ಯಾಗ್ ಮತ್ತು ಯುನಿಫಾರ್ಮ್ ಗಳನ್ನು ವಿತರಿಸುವ ಕಾರ್ಯಕ್ರಮವು ಶಾಲೆಯಲ್ಲಿ ಜರಗಿತು.
ಅಲಯನ್ಸ್ ಕ್ಲಬ್ಬಿನ ಎರಡೂ ಸಂಸ್ಥೆಯ ಅಧ್ಯಕರುಗಳಾದ ಕೆ. ರಾಮಚಂದ್ರ ಭಟ್ ಮತ್ತು ಸುನೀತ ಹೆಬ್ಬಾರ್ ರವರು ಸಂಸ್ಥೆಯ ಉದ್ದೇಶ ಗಳನ್ನು ತಿಳಿಸಿದರು. ಅವರು ಮುಖ್ಯ ಶಿಕ್ಷಕಿ ಯವರಿಗೆ ಸ್ಕೂಲ್ ಬ್ಯಾಗ್ ಮತ್ತು ಯುನಿಫಾರ್ಮ್ ಗಳನ್ನು ಹಸ್ತಾಂತರಿಸಿ, ಮಕ್ಕಳಿಗೆ ವಿತರಿಸಿ ಶುಭ ಹಾರೈಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಾಜೀವ ಕುಲಾಲ್, ಅಲಯನ್ಸ್ ಕ್ಲಬ್ ಹೆಬ್ರಿ ಇದರ ಕಾರ್ಯದರ್ಶಿ ಬಾಲಚಂದ್ರ ಎಂ. ಕಾರ್ಯದರ್ಶಿ ರಮ್ಯಕಾಂತಿ, ಕ್ಲಬ್ ಸದಸ್ಯೆ ರತ್ನಾವತಿ ಉಪಸ್ಥಿತರಿದ್ದರು. ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಅಲಯನ್ಸ್ ಸಂಸ್ಥೆ ವತಿಯಿಂದ ಎಳ್ಳು ಬೆಲ್ಲ ಹಂಚಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಸುಮತಿ ಬಾಯಿ ಪ್ರಾಸ್ತಾ ವಿಕ ಮಾತನಾಡಿ ಸ್ವಾಗತಿಸಿದರು. ಶಾಲಾ ಶಿಕ್ಷಕಿ ವಂದಿಸಿದರು. ಶಾಲಾ ಶಿಕ್ಷಕ ವೃಂದ, ಶಾಲಾ ಅಭಿವೃದ್ದಿ ಸಮಿತಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಇದ್ದರು.

