ಆಟದ ಜೊತೆಗೆ ಹುತಾತ್ಮ ಸೈನಿಕರನ್ನು ಸ್ಮರಿಸುವ ಕಾರ್ಯ ಯುವಕರಲ್ಲಿ ದೇಶಪ್ರೇಮ ಮೂಡಿಸಲು ಸಹಕಾರಿಯಾಗಿದೆ.. ಜನಾರ್ಧನ ಪೂಜಾರಿ

0
303

ಬಂಟ್ವಾಳ : ಆಟದ ಜೊತೆಗೆ ಹುತಾತ್ಮ ಸೈನಿಕರನ್ನು ಸ್ಮರಿಸುವ ಕಾರ್ಯ ಯುವಕರಲ್ಲಿ ದೇಶಪ್ರೇಮ ಮೂಡಿಸಲು ಸಹಕಾರಿಯಾಗಿದೆ, ಇಂತಹ ಕಾರ್ಯಕ್ರಮಗಳ ಮೂಲಕ ನಡೆದ ಕ್ರೀಡಾಕೂಟದಿಂದ ಉಳಿಕೆ ಮೊತ್ತವನ್ನು ಸಮಾಜ ಸೇವೆಗೆ ಬಳಸಿಕೊಳ್ಳಿ ಎಂದು ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ಹೇಳಿದರು.
ಅವರು ಆದಿತ್ಯವಾರ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಟೀಮ್ ವೀರಕಂಭ ಆಶ್ರಯದಲ್ಲಿ ವೀರಕಂಭ ಗ್ರಾಮದ ನಂದನತಿಮಾರ್ ಕ್ರಿಕೆಟ್ ಮೈದಾನದಲ್ಲಿ ನಡೆದ ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾಟ ಸಿಂಧೂರ್ ಟ್ರೋಫಿ ಪಂದ್ಯಟದಲ್ಲಿ
ಭಯೋತ್ಪಾದಕರ ದಾಳಿಯಿಂದ ಮರಣ ಹೊಂದಿದ ಭಾರತೀಯರಿಗೆ ಗೌರವ ಶ್ರದ್ಧಾಂಜಲಿ ಹಾಗೂ ಯಶಸ್ವಿ ಸಿಂಧೂರ ಆಪರೇಷನ್ ನಲ್ಲಿ ವೀರಮರಣ ಹೊಂದಿದ ಭಾರತೀಯ ಸೈನಿಕರಿಗೆ ಪುಷ್ಪಾರ್ಚನೆ ಕಾರ್ಯಕ್ರಮದಲ್ಲಿ ಪುಷ್ಪ ಸಮರ್ಪಿಸಿ ಪಂದ್ಯಾಟವನ್ನು ಉದ್ಘಾಟಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ,ದಿನೇಶ್ ಪೂಜಾರಿ, ನಿಶಾಂತ್ ರೈ,ಸಂದೀಪ್ ಪೂಜಾರಿ ಕಲಿಂಜ, ಮಾಜಿ ಸದಸ್ಯರಾದ ರಾಮಚಂದ್ರ ಪ್ರಭು, ಜಯಪ್ರಕಾಶ್ ತೆಕ್ಕಿಪಾಪು, ಶೀನಪ್ಪ ಗೌಡ ನಂದನತಿಮಾರ್, ಸಂದೀಪ್ ಶೆಟ್ಟಿ ಅರೆಬೆಟ್ಟು, ಕೃಷ್ಣಪ್ಪ ಪೂಜಾರಿ ಕೆಪುಳಕೋಡಿ, ಕೇಶವ ನಾಯ್ಕ್ ಕೆಮ್ಮಟೆ, ಆನಂದ ಆಳ್ವ ಗೊಳ್ತಾಮಜಲ್, ರಮೇಶ್ ಗೌಡ ಮೈರಾ, ತಿಲಕ್ ರಾಜ್, ನಾಗರಾಜ್ ಶೆಟ್ಟಿ ಅರೆಬೆಟ್ಟು,ವೇಣುಗೋಪಾಲ್ ವಿ ಆರ್ ಕೆ, ಸೌಮ್ಯ ವೇಣುಗೋಪಾಲ್,ಪ್ರಶಾಂತ್ ತೆಕ್ಕಿಪಾಪು, ಕೇಶವ ವಿ ಆರ್ ಕೆ, ಸತೀಶ್ ನಾಯ್ಕ ಕಿನ್ನಿ ಮೂಲೆ, ಧನರಾಜ್ ಗಾಣಿಗ ಗುಡ್ಡೆ ತೋಟ, ಮೊದಲಾದವರು ಉಪಸ್ಥಿತರಿದ್ದರು.
ನಂತರ ನಡೆದ ಸಿಂಧೂರ ಟ್ರೋಫಿ ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ಫ್ರೆಂಡ್ಸ್ ರಾಯಪ್ಪಕೋಡಿ, ದ್ವಿತೀಯ ಬಹುಮಾನವನ್ನು ಸಿದ್ಧಿವಿನಾಯಕ ತುಳಸಿವನ, ಪ್ರೀತಿಯ ಬಹುಮಾನವನ್ನು ಟೀಮ್ ವೀರಕಂಭ ಪಡೆದುಕೊಂಡಿತು.
ಪಂದ್ಯಾಟ ಸಂಘಟಕ ಪ್ರಮುಖರಾದ ಮೇಘನಾಥ್ ರೈ ವೀರಕಂಭ ಸ್ವಾಗತಿಸಿ, ನಿತೀಶ್ ಗೌಡ ಮೈರಾ ವಂದಿಸಿದರು. ಡಿಜೆ ಮಿಥುನ್ ಕಾರ್ಯಕ್ರಮ ನಿರೋಪಿಸಿದ್ದರು.

LEAVE A REPLY

Please enter your comment!
Please enter your name here