ಹಂಗಾರಕಟ್ಟೆ : 64 ವರ್ಷಗಳ ಸುದೀರ್ಘ ಹಾಗೂ ಭವ್ಯ ಇತಿಹಾಸ ಹೊಂದಿರುವ ಚೇತನಾ ಪ್ರೌಢಶಾಲೆ, ಹಂಗಾರಕಟ್ಟೆಯಲ್ಲಿ ಹಳೆ ವಿದ್ಯಾರ್ಥಿಗಳ ಸಭೆ ನವೆಂಬರ್ 1ರ ಭಾನುವಾರ ನಡೆಯಿತು. ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ. ಭರತ್ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧಿಕೃತವಾಗಿ ‘ಅಂದಿನ ವಿದ್ಯಾರ್ಥಿ ಸಂಘ’ವನ್ನು ರಚಿಸಲಾಯಿತು.
ಸಭೆಯಲ್ಲಿ ಸಂಘದ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಬಿ. ರಾಜರಾಮ್ ಭಟ್, ಅಧ್ಯಕ್ಷರಾಗಿ ಪ್ರವೀಣ್ ಯಕ್ಷಿಮಠ, ಉಪಾಧ್ಯಕ್ಷರಾಗಿ ಶಿವರಾಮ್ ಶ್ರೀಯಾನ್ ಹಾಗೂ ಜಯಲಕ್ಷ್ಮಿ ಶೆಟ್ಟಿ, ಕಾರ್ಯದರ್ಶಿಯಾಗಿ ಮೇಲ್ವಿನ್ ಅಲ್ಮೇಡಾ, ಜೊತೆ ಕಾರ್ಯದರ್ಶಿಯಾಗಿ ಲುವಿ ರೋಡ್ರಿಗಸ್ ಮತ್ತು ಕೋಶಾಧಿಕಾರಿಯಾಗಿ ಹೆಚ್. ರಾಮದೇವ ಹಂದೆ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೃಷ್ಣಮೂರ್ತಿ ಮಕ್ಕಿತಾಯ, ಮೊಹಮ್ಮದ್ ಆರಿಫ್, ಡಾ. ಕೆ. ಸತೀಶ್ ಕಾಮತ್, ಆನಂದ್ ಎಂ., ಪ್ರಶಾಂತ್ ಶೆಟ್ಟಿ, ನಾಗರಾಜ ಕಾರಂತ್, ಬಾಲಮುರಳಿ ಕೃಷ್ಣ, ಗಿರೀಶ್ ಮಯ್ಯ, ನಾಗೇಶ ಪ್ರಭು, ಜಯಂತಿ ಪ್ರತಾಪ್ ಶೆಟ್ಟಿ, ಲೀಲಾವತಿ ಜೀ. ಪೂಜಾರಿ, ಬಿ.ಎಸ್. ನಟರಾಜ್ ಗಾಣಿಗ, ದಿನೇಶ್ ಬಾಂಧವ್ಯ, ಬಿ. ದಿವಾಕರ್ ಶೆಟ್ಟಿ, ಸುಮಿತ್ರ ಗಾಣಿಗ, ಸೂರಜ್ ಅಮೀನ್, ಪೂಜಾಶ್ರೀ, ದಿನೇಶ್ ದೇವಾಡಿಗ, ನಟರಾಜ್ ಆಚಾರ್ಯ, ಅಲೆಕ್ಸಾಂಡರ್ ಚಾರ್ಲ್ಸ್ ಫುಟ್ರಾಡೊ, ಪ್ರಮೋದ್ ಪೂಜಾರಿ, ಅಖಿಲ್ ದೇವಾಡಿಗ, ವಿಶ್ವಂಭರ ಅಲ್ಸೆ ಎ., ಜಗನ್ನಾಥ ಬಂಗೇರ, ಆರತಿ, ಮನ್ವಿತ್, ಆಯುಷ್ ದೇವಾಡಿಗ, ಹೆನ್ರಿ ಲೂಯಿಸ್, ಜಯಂತಿ, ದರ್ಶನ್ ದೇವಾಡಿಗ, ತ್ರಿಷಾ, ಜೀವಿತಾ, ಎಚ್. ಶಂಕರ್ ಹಾಗೂ ಸುಪ್ರೀತ್ ಆರ್. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಕಲ್ಪನಾ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತ ಮಂಡಳಿಯ ಜೊತೆ ಕಾರ್ಯದರ್ಶಿ ವಿಘ್ನೇಶ್ವರ ಅಡಿಗ ಅವರು ಅಂದಿನ ವಿದ್ಯಾರ್ಥಿ ಸಂಘದ ರಚನೆಯ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಹರ್ಷವರ್ಧನ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಎಂ. ಪಕೀರಪ್ಪ ಧನ್ಯವಾದ ಸಮರ್ಪಿಸಿದರು.
ಹಳೆಯ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಶಾಲೆಯೊಂದಿಗಿನ ಅವರ ನಂಟನ್ನು ಮತ್ತಷ್ಟು ಗಟ್ಟಿಗೊಳಿಸುವ ಹಾಗೂ ಶಾಲೆಯ ಶೈಕ್ಷಣಿಕ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ಈ ಸಂಘದ ರಚನೆ ಮಹತ್ವದ ಹೆಜ್ಜೆಯಾಗಿದೆ.

