ಹೆಬ್ರಿ: ದಿನಾಂಕ 2- 7 -2025 ನೇ ಬುಧವಾರ ವಿದ್ಯಾರ್ಥಿ ಪರಿಷತ್ತಿನ ಪದಗ್ರಹಣ ಕಾರ್ಯಕ್ರಮ ನಡೆಯಿತು. ಅಮೃತಭಾರತಿ ಟ್ರಸ್ಟ್ನ ಪದಾಧಿಕಾರಿಗಳು, ಅತಿಥಿಗಳಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ಅತ್ಯುತ್ತಮ ಶಿಕ್ಷಕ ಶ್ರೀಯುತ ಸುರೇಶ್ ಮರಕಾಲರು ತಾಯಿ ಸರಸ್ವತಿಗೆ, ಪುಷ್ಪಾರ್ಚನೆಗೈದು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಆಯ್ಕೆಯಾದ ಶಾಲಾ ನಾಯಕರುಗಳಿಗೆ ಅಮೃತ ಭಾರತಿ ಟ್ರಸ್ಟ್ ನ ಕಾರ್ಯದರ್ಶಿಗಳಾದ ಗುರುದಾಸ್ ಶೆಣೈ ರವರು ಪ್ರತಿಜ್ಞಾವಿಧಿ ನೀಡಿ ಅಧ್ಯಕ್ಷೀಯ ನುಡಿಯಲ್ಲಿ, “ಸಮಾಜದ ಮುಂದಿನ ಗುರುತರ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ” ಎಂದರು. ಪ್ರಧಾನಿ ಮೋದಿಯ ದಕ್ಷ ಆಡಳಿತ ನೆನಪಿಸುತ್ತ ,ಶುಭ ಹಾರೈಸಿದರು. ಅಮೃತ ಭಾರತಿ ಟ್ರಸ್ಟ್ ನ ಟ್ರಸ್ಟಿಗಳಾದ ಶ್ರೀಯುತ ಬಾಲಕೃಷ್ಣ ಮಲ್ಯರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಸುಸ್ಥಿರ ಆಡಳಿತ ಭ್ರಷ್ಟಾಚಾರ ರಹಿತ ರಾಜಕಾರಣ ನೀತಿಯನ್ನು ವಿದ್ಯಾರ್ಥಿ ಜೀವನದಲ್ಲೇ ಮೈಗೂಡಿಸಿಕೊಳ್ಳಬೇಕೆಂದರು. ಮುಖ್ಯ ಅತಿಥಿಗಳಾಗಿ ಸುರೇಶ್ ಮರಕಾಲರು ಮಾತನಾಡುತ್ತ ,ಭಾರತದಲ್ಲಿ ಹುಟ್ಟಿರುವುದೇ ನಮ್ಮ ಶ್ರೇಷ್ಠತೆ, ಈ ದೇಶಕ್ಕೆ ಭವ್ಯ ರಾಜಕೀಯ ಪರಂಪರೆ ಇದೆ .ಕೌಟಿಲ್ಯ ,ಲಾಲ್ ಬಹದ್ದೂರ್ ಶಾಸ್ತ್ರಿ ಅಬ್ದುಲ್ ಕಲಾಂ ರಂತಹ ರಾಜಕೀಯ ಧುರೀಣರನ್ನು ನೆನಪಿಸಿದರು. ಟ್ರಸ್ಟಿಗಳಾದ ಸತೀಶ್ ಪೈ ಹಾಗೂ ಶೈಲೇಶ್ ಕಿಣಿಯವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಅರುಣ್, ಮುಖ್ಯೋಪಾಧ್ಯಾಯನಿ ಅನಿತಾ, ಶಕುಂತಲಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಸ್ಮಿತ ಸ್ವಾಗತಿಸಿದರು ,ವಿದ್ಯಾರ್ಥಿನಿ ಧಾತ್ರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಭವಿಷ್ಯ ವಂದಿಸಿದರು.