ಶ್ರೀ ಜನಾರ್ದನ ಎಜುಕೇಶನ್ ಟ್ರಸ್ಟ್ (ರಿ) ಎಳ್ಳಾರೆ , ಇಲ್ಲಿ ದಿನಾಂಕ 18-1-2026ನೇ ಭಾನುವಾರದಂದು ವಿದ್ಯಾಭಾರತಿ ಉಡುಪಿ ಜಿಲ್ಲೆಯ ಶಾಲೆಗಳ” ಜಿಲ್ಲಾ ಮಟ್ಟದ ಕುಣಿತ ಭಜನೆ- ಪಾದ ಪಂಕಜಂ 2026″ ನಡೆಯಿತು.ಇದರಲ್ಲಿ ಪ್ರಥಮ ಬಾರಿಗೆ ಐತಿಹಾಸಿಕ ಸಾಧನೆ ಮಾಡಿದ ಅಮೃತ ಭಾರತಿ ವಿದ್ಯಾ ಕೇಂದ್ರದ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಎರಡು ತಂಡಗಳ ಒಟ್ಟು 28 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿ, ಎರಡು ವಿಭಾಗಗಳಲ್ಲೂ ಪ್ರಥಮ ಬಹುಮಾನ ಗಳಿಸಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಮತ್ತು ಇವರಿಗೆ ತರಬೇತಿ ನೀಡಿದ ಶ್ರೀನಿವಾಸ ಪೂಜಾರಿ, ಧೀರಜ್, ಸಂಜಯ್, ಸುಜಿತ್ ಅಹನ್, ವಿಕ್ರಮ್ ,ಕುಣಿತ ಭಜನಾ ಜವಾಬ್ದಾರಿ ನಿರ್ವಹಿಸಿದ ಸಂಸ್ಥೆಯ ಸಹಶಿಕ್ಷಕಿ ಶ್ರೀಮತಿ ಗುಣವತಿ, ಶಿಕ್ಷಕ ಸುಶಾಂತ್ , ಇವರನ್ನು ಅಮೃತ ಭಾರತಿ ಟ್ರಸ್ಟ್ ನ ಅಧ್ಯಕ್ಷರು, ಕಾರ್ಯದರ್ಶಿಗಳು, ಟ್ರಸ್ಟಿಗಳು ,ಸರ್ವ ಸದಸ್ಯರು, ಪ್ರಾಂಶುಪಾಲರು, ಮುಖ್ಯೋಪಾಧ್ಯಾಯಿನಿ, ಶಿಕ್ಷಕ ವರ್ಗ, ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
Home Uncategorized ಬಾಲ ಹೆಜ್ಜೆಯೊಂದಿಗೆ ಪಾದಪಂಕಜಂನಲ್ಲಿ, ಅಗ್ರಸ್ಥಾನದೊಂದಿಗೆ ಬೆಳಗಿದ ಅಮೃತ ಭಾರತಿ ವಿದ್ಯಾ ಕೇಂದ್ರ

