“ಐಲೇಸ” ತಂಡದಿಂದ ತುಳು ಭಾಷೆಗೆ ಸಂಗೀತ ಗೌರವ

0
36

ಶಾಂತರಾಮ ಶೆಟ್ಟಿ ಅವರ ನೇತೃತ್ವದಲ್ಲಿ, ಹಿನ್ನೆಲೆ ಗಾಯಕ ರಮೇಶ್‌ಚಂದ್ರ ಅವರ ಸಂಗೀತ ಸಂಯೋಜನೆಯಲ್ಲಿ ರೂಪುಗೊಂಡ ಅಂತರರಾಷ್ಟ್ರೀಯ ವೇದಿಕೆ “ಐಲೇಸ” ತಂಡದ ವಿಶೇಷ ಕಾರ್ಯಕ್ರಮವು , ತುಳು ಭಾಷೆಯ ಘನತೆಯನ್ನು ಮತ್ತಷ್ಟು ಹೆಚ್ಚಿಸುವಂತೆ ಮೂಡಿಬಂತು.

ಈ ಕಾರ್ಯಕ್ರಮದಲ್ಲಿ ತಂಡವು ತುಳುವಿನ ಅತ್ಯುತ್ತಮ ಗೀತೆಯನ್ನು ಪ್ರಸ್ತುತಪಡಿಸಿ, ಶ್ರೀಮಂತ ತುಳು ಭಾಷೆ ಹಾಗೂ ಸಂಸ್ಕೃತಿಯ ಸೌಂದರ್ಯವನ್ನು ರಾಷ್ಟ್ರ ಮಟ್ಟದಲ್ಲಿ ಪರಿಚಯಿಸಿತು. ಅಲಯನ್ಸ್ ಯುನಿವರ್ಸಿಟಿಯಲ್ಲಿ ನಡೆದ ತುಳು ಭಾಷೆಯ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಈ ಸಂಗೀತ ಪ್ರದರ್ಶನವು ಕಾರ್ಯಕ್ರಮದ ಆಕರ್ಷಣೆಯಾಗಿ ಪರಿಣಮಿಸಿತು. ಕಲಾವಿದರ ಸಮರ್ಪಿತ ಗಾಯನ ಮತ್ತು ಸಂಗೀತ ಸಂಯೋಜನೆಯಿಂದ ಸಭಿಕರು ಮಂತ್ರಮುಗ್ಧರಾಗಿ, ತುಳು ಭಾಷೆಯ ಶಕ್ತಿ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯತೆ ಇನ್ನಷ್ಟು ಉಜ್ಜುವಂತೆ ಮಾಡಿತು. ಈ ಸಂಗೀತ ಕ್ಷಣವು ತುಳು ಭಾಷಾಭಿಮಾನಿಗಳಿಗೆ ಹೆಮ್ಮೆಯ ಹಾಗೂ ಸ್ಮರಣೀಯ ಕ್ಷಣವಾಗಿ ಉಳಿಯಿತು.

LEAVE A REPLY

Please enter your comment!
Please enter your name here