ತುಳುನಾಡಿನ ಉತ್ತರ ಭಾಗದ ಕುಂದಾಪುರದ ಬಸ್ರೂರಿನಲ್ಲಿ ಇರುವ ತುಳುನಾಡಿನ ಪುರಾತನ ಏಕಮಾತ್ರ ತುಳುವೇಶ್ವರ ದೇವಸ್ಥಾನದ ಅಷ್ಟ ಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಮಾಡಲು ಕೇರಳದ ಕಾಸರಗೋಡಿನಿಂದ ಉತ್ತರ ಕನ್ನಡದ ಹೊನ್ನಾವರ ಸಮೀಪದ ಕಾಸರಕೋಡಿನ ವರೆಗಿನ ಸರ್ವ ತುಳುನಾಡ ಮಂದಿ ಕೈ ಜೋಡಿಸಿ ದುಡಿಯಲು ಬೆಂಗಳೂರಿನ ಅಲಯನ್ಸ್ ಯೂನಿವರ್ಸಿಟಿ ಸಹಭಾಗಿತ್ವದಲ್ಲಿ ತುಳು ವರ್ಲ್ಡ್ ಫೌಂಡೇಶನ್ ಆಶ್ರಯದಲ್ಲಿ ಜರುಗಿದ ತುಳುನಾಡ ಆದಿ ಮೂಲ ದೈವೋಲು ಬೆಮ್ಮರ್ ಬೊಕ್ಕ ಲೆಕ್ಕೆಸಿರಿ ಮೂಲ ಪರಿಕಲ್ಪನೆದ ಮಿತ್ ಒಂದು ಅಧ್ಯಯನ ಎಂಬ ಎರಡು ದಿನಗಳ ಸೆಮಿನಾರ್ ನಲ್ಲಿ ಭಾಗವಹಿಸಿದ , ಹಿರಿ ಕಿರಿಯ ತುಳುನಾಡ ಸಾಹಿತಿಗಳು ಚಿಂತಕರುಗಳು ಸಂಘಟಕರು ಒಟ್ಟಾಗಿ ಮುಂದುವರಿಯಲು ಸಮಾರೋಪ ಸಮಾರಂಭದಲ್ಲಿ ಕರೆ ಕೊಡಲಾಯಿತು.


