
ವಿದ್ಯುತ್ ಉಪಕರಣಗಳ ದಕ್ಷತೆ ಹೆಚ್ಚಿಸಲು ಅತ್ಯಾಧುನಿಕ ತಂತ್ರಜ್ಞಾನ ಪ್ರಾತ್ಯಕ್ಷಿಕೆ: 120 ದಿನ, 5 ರಾಜ್ಯ, 20 ನಗರಗಳಲ್ಲಿ ಸಂಚಾರ
ಮಂಗಳೂರು : ಜಾಗತಿಕ ಇಂಧನ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ಸಂಸ್ಥೆ ಶ್ನೇಯ್ಡರ್ ಎಲೆಕ್ಟ್ರಿಕ್ ಸಂಸ್ಥೆಯು ಕೈಗಾರಿಕಾ ವಲಯದ ವಿದ್ಯುತ್ ಉಪಕರಣಗಳ ನಿರ್ವಹಣೆಗೆ ಅತ್ಯಾಧುನಿಕ ತಂತ್ರಜ್ಞಾನ ಒದಗಿಸುವ ನಿಟ್ಟಿನಲ್ಲಿ ವಿನೂತನ ಸರ್ವೀಸಸ್ ಎಕ್ಸ್ಪ್ರೆಸ್ ಸಂಚಾರಿ ಇನ್ನೋವೇಶನ್ ಹಬ್ ಎಂಬ ವಿನೂತನ ಪ್ರಯತ್ನ ಆರಂಭಿಸಿದ್ದು, ಈ ಯೋಜನೆಯ ಭಾಗವಾಗಿ ಸಂಸ್ಥೆಯ ಸಂಚಾರಿ ಇನ್ನೋವೇಷನ್ ಹಬ್ ಶೀಘ್ರದಲ್ಲೇ ಮಂಗಳೂರಿಗೆ ಆಗಮಿಸಲಿದೆ.
ದಕ್ಷಿಣ ಭಾರತದ ಪ್ರಮುಖ ಕೈಗಾರಿಕಾ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡು ಬೆಂಗಳೂರಿನಿಂದ ಆರಂಭವಾಗಿರುವ ಈ ವಿಶೇಷ ಸಂಚಾರಿ ಘಟಕವು, ಮುಂದಿನ 120 ದಿನಗಳ ಅವಧಿಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ 20ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ಸಂಚರಿಸಲಿದ್ದು, ಕರಾವಳಿಯ ಪ್ರಮುಖ ವಾಣಿಜ್ಯ ಕೇಂದ್ರವಾದ ಮಂಗಳೂರಿಗೂ ಭೇಟಿ ನೀಡಲಿದೆ.
ಕೈಗಾರಿಕೆಗಳಲ್ಲಿ ಬಳಸಲಾಗುವ ಅತ್ಯಂತ ನಿರ್ಣಾಯಕ ವಿದ್ಯುತ್ ಉಪಕರಣಗಳ ದಕ್ಷತೆ ಹೆಚ್ಚಿಸಲು ಎಐ ಆಧಾರಿತ ನಿಗಾ, ಸ್ಥಿತಿ-ಆಧಾರಿತ ನಿರ್ವಹಣೆ ಮತ್ತು ಯಂತ್ರಗಳ ಸಮಗ್ರ ಜೀವಿತಾವಧಿ ಪರಿಹಾರಗಳ ನೇರ ಪ್ರಾತ್ಯಕ್ಷಿಕೆಗಳನ್ನು ಸ್ಥಳೀಯ ಎಂಜಿನಿಯರ್ಗಳು ಹಾಗೂ ಉದ್ಯಮಿಗಳಿ ಅವರ ಸಮೀಪದಲ್ಲಿಯೇ ಈ ವಾಹನವು ಪ್ರದರ್ಶಿಸಲಿದೆ.
ದೇಶದಾದ್ಯಂತ ಲಕ್ಷಾಂತರ ಕೈಗಾರಿಕಾ ಹಾಗೂ ವಾಣಿಜ್ಯ ವಿದ್ಯುತ್ ಉಪಕರಣಗಳು ಇಂದಿಗೂ ಅಧಿಕೃತವಾಗಿ ನೋಂದಣಿಯಾಗದೆ ಉಳಿದಿವೆ. ಇದರಿಂದಾಗಿ ಅವುಗಳ ಸೂಕ್ತ ಮೇಲ್ವಿಚಾರಣೆ, ಕಾಲಮಿತಿಯ ನಿರ್ವಹಣೆ ಮತ್ತು ದೀರ್ಘಕಾಲೀನ ಬಾಳಿಕೆಯಲ್ಲಿ ತೊಂದರೆ ಉಂಟಾಗುತ್ತಿದೆ. ಯಂತ್ರಗಳು ಅನಿರೀಕ್ಷಿತವಾಗಿ ಕೈಕೊಟ್ಟು ಉತ್ಪಾದನೆ ಸ್ಥಗಿತಗೊಳ್ಳುವುದನ್ನು ತಪ್ಪಿಸಲು, ಮುನ್ಸೂಚನೆ ಆಧಾರಿತ ಮುನ್ನೆಚ್ಚರಿಕೆ ವಹಿಸಲು ಹಾಗೂ ಉಪಕರಣಗಳ ಗರಿಷ್ಠ ಕಾರ್ಯಕ್ಷಮತೆ ಕಾಪಾಡಿಕೊಳ್ಳಲು ಸಂಸ್ಥೆಗಳು ತಮ್ಮ ಸಾಧನಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ಶ್ನೇಯ್ಡರ್ ಎಲೆಕ್ಟ್ರಿಕ್ ಕರೆ ನೀಡಿದೆ.
ಬೆಂಗಳೂರಿನಲ್ಲಿ ನಡೆದ ಚಾಲನಾ ಸಮಾರಂಭದಲ್ಲಿ ಮಾತನಾಡಿದ ಶ್ನೇಯ್ಡರ್ ಎಲೆಕ್ಟ್ರಿಕ್ ಇಂಡಿಯಾದ ಸೇವಾ ವಿಭಾಗದ ಉಪಾಧ್ಯಕ್ಷೆ ದಾಮಿನಿ ಚೌಧರಿ ಅವರು, “ನಮ್ಮ ಸುಧಾರಿತ ಸೇವೆಗಳನ್ನು ನೇರವಾಗಿ ಕೈಗಾರಿಕೆಗಳಿದ್ದಲ್ಲಿಗೇ ಕೊಂಡೊಯ್ಯಲು ಮತ್ತು ವಾಸ್ತವಿಕ ಕಾರ್ಯನಿರ್ವಹಣಾ ಪರಿಸರದಲ್ಲಿ ಅವುಗಳ ಮಹತ್ವವನ್ನು ಮನವರಿಕೆ ಮಾಡಿಕೊಡಲು ಸರ್ವೀಸಸ್ ಎಕ್ಸ್ಪ್ರೆಸ್ ಉತ್ತಮ ವೇದಿಕೆಯಾಗಿದೆ. ಡಿಜಿಟಲ್ ನಿಗಾ ಹಾಗೂ ಸಮಗ್ರ ನಿರ್ವಹಣೆಯನ್ನು ಒಗ್ಗೂಡಿಸುವ ಮೂಲಕ ಕೈಗಾರಿಕೆಗಳು ಅನಿರೀಕ್ಷಿತ ಸ್ಥಗಿತ ಸಮಸ್ಯೆಯಿಂದ ಮುಕ್ತಿ ಪಡೆಯಲು ನೆರವಾಗುವುದು ನಮ್ಮ ಗುರಿ” ಎಂದು ತಿಳಿಸಿದರು.
ಡೇಟಾ ಸೆಂಟರ್ಗಳು, ಬಂದರು ಆಧಾರಿತ ಕೈಗಾರಿಕೆಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಪವರ್ ಗ್ರಿಡ್ಗಳಿಗೆ ಅಗತ್ಯವಿರುವ ಪರಿಹಾರಗಳು ಈ ವಾಹನದಲ್ಲಿರಲಿವೆ. ಮಂಗಳೂರಿನ ಸ್ಥಳೀಯ ಉದ್ಯಮಿಗಳು, ಘಟಕ ಮುಖ್ಯಸ್ಥರು ಹಾಗೂ ತಾಂತ್ರಿಕ ಪರಿಣತರು ಕಂಪನಿಯ ಪರಿಣತರೊಂದಿಗೆ ಮುಖಾಮುಖಿ ಚರ್ಚಿಸಿ ತಮ್ಮ ವಿದ್ಯುತ್ ಜಾಲವನ್ನು ಆಧುನೀಕರಿಸಿಕೊಳ್ಳಲು ಇದು ಅತ್ಯುತ್ತಮ ಅವಕಾಶ ಕಲ್ಪಿಸಲಿದೆ. ಶೀಘ್ರದಲ್ಲೇ ಈ ವಾಹನ ಪ್ರಮುಖ ಕೈಗಾರಿಕಾ ವಲಯಗಳಿಗೆ ಭೇಟಿ ನೀಡಲಿದೆ.
