ಗೌರವಾನ್ವಿತ ಸಚಿವರಲ್ಲಿ ನಮ್ಮ ಅರಿಕೆ ಏನೆಂದರೆ,
ನಾವು ಕರ್ನಾಟಕದಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಬೈಕ್ ಟ್ಯಾಕ್ಸಿಅಸೋಸಿಯೇಷನ್ ಸದಸ್ಯರು ಮತ್ತು ರೈಡರ್ ಗಳ ಪರವಾಗಿ ಈ ಪತ್ರ ಬರೆಯುತ್ತಿದ್ದು ನಾವು ಲಕ್ಷಾಂತರ ಗಿಗ್ ಕಾರ್ಮಿಕರ ಧ್ವನಿಗಳು ಮತ್ತು ಲಕ್ಷಾಂತರ ನಾಗರಿಕರ ಸಂಚಾರದ ಅಗತ್ಯಗಳನ್ನು ಪ್ರತಿನಿಧಿಸುತ್ತಿದ್ದೇವೆ. ಮೊದಲಿಗೆ ಕರ್ನಾಟಕ ಸರ್ಕಾರಕ್ಕೆ ಎಲ್ಲರನ್ನೂ ಒಳಗೊಳ್ಳುವ ಮೊಬಿಲಿಟಿ, ಡಿಜಿಟಲ್ ಪರಿವರ್ತನೆ ಮತ್ತು ಘನತೆಯ ಜೀವನೋಪಾಯಗಳಿಗೆ ಒತ್ತು ನೀಡುವ ಪ್ರಯತ್ನಗಳಿಗೆ ನಾವು ನಮ್ಮ ಹೃದಯಪೂರ್ವಕ ಪ್ರಶಂಸೆಗಳನ್ನು ಸಲ್ಲಿಸುತ್ತೇವೆ.
ಕಳೆದ 7- 8 ವರ್ಷಗಳಿಂದ ಬೈಕ್ ಟ್ಯಾಕ್ಸಿಗಳು ಕರ್ನಾಟಕದ ನಗರ ಸಾರಿಗೆ ವ್ಯವಸ್ಥೆಯ ಪ್ರಮುಖ ಭಾಗವಾಗಿವೆ. ಬೆಂಗಳೂರಿನಂತಹ ಹೆಚ್ಚಿನ ಜನನಿಬಿಡ ನಗರಗಳಲ್ಲಿ ಅವು ವೇಗದ, ಕೈಗೆಟುಕುವ ಮತ್ತು ವಿಶ್ವಾಸಾರ್ಹ ಸಾರಿಗೆ ಪರಿಹಾರಗಳನ್ನು ಮುಖ್ಯವಾಗಿ ಕೊನೆಯ ಹಂತದ ಪ್ರಯಾಣಕ್ಕೆ ನೀಡುತ್ತವೆ. ಈ ಸೇವೆಗಳನ್ನು ಹೆಚ್ಚಾಗಿ ಕರ್ನಾಟಕದ ಗ್ರಾಮೀಣ ಮತ್ತು ಅರೆ-ಪಟ್ಟಣ ಜಿಲ್ಲೆಗಳಿಂದ ಬರುವ ಕೆಲಸಗಾರರು, ವಿದ್ಯಾರ್ಥಿಗಳು ಮತ್ತು ಅರೆಕಾಲಿಕ ಉದ್ಯೋಗಿಗಳು ಮತ್ತು ಯುವಜನರು ನಂಬಿಕೊಂಡಿದ್ದಾರೆ.
ನಾವು ಕರ್ನಾಟಕದ ಬೈಕ್ ಟ್ಯಾಕ್ಸಿ ರೈಡರ್ ಗಳು ನಿಮಗೆ ಕೈ ಜೋಡಿಸಿ ಮತ್ತು ನಮ್ಮ ಹೃದಯಗಳಲ್ಲಿ ಭರವಸೆ ಇರಿಸಿಕೊಂಡು ಈ ಪತ್ರ ಬರೆಯುತ್ತಿದ್ದೇವೆ. ನಾವು ಪ್ರತಿನಿತ್ಯ ನಮ್ಮ ನಗರಗಳಲ್ಲಿ ಮಳೆಯಿಂದ ರಾಡಿಯಾದ ಬೆಳಗುಗಳಲ್ಲಿ, ಬಿಸಿಲಿನ ಝಳದ ಮಧ್ಯಾಹ್ನಗಳಲ್ಲಿ ನಮ್ಮ ನಗರದ ಬೀದಿಗಳಲ್ಲಿ ಹಾಗೂ ಸಂಜೆಗತ್ತಲಲ್ಲಿ ಜನರನ್ನು ಆಸ್ಪತ್ರೆಗಳು, ಶಾಲೆಗಳು, ಕಛೇರಿಗಳು ಮತ್ತು ಮನೆಗಳಿಗೆ ಕೊಂಡೊಯ್ಯುವ ನೀವು ಕಾಣುವ ಪ್ರತಿನಿತ್ಯದ ಮುಖಗಳು.
ನಮಗೆ ಬೈಕ್ ಟ್ಯಾಕ್ಸಿ ಓಡಿಸುವುದು ಸಾರಿಗೆಯ ಮಾರ್ಗ ಮಾತ್ರವಲ್ಲ, ಇದು ನಮ್ಮ ದಿನನಿತ್ಯದ ಅನ್ನದ ತುತ್ತು, ಭವಿಷ್ಯಕ್ಕೆ ನಮ್ಮ ಭರವಸೆ ಮತ್ತು ಹಲವು ಪ್ರಕರಣಗಳಲ್ಲಿ ನಮ್ಮ ಕುಟುಂಬಗಳಿಗೆ ಘನತೆ ನೀಡಬಲ್ಲ ಏಕೈಕ ಮಾರ್ಗವಾಗಿದೆ.
ನಮ್ಮಲ್ಲಿ ಬಹಳಷ್ಟು ಮಂದಿ ಸಣ್ಣ ಮನೆಗಳಿಂದ ಬಂದಿದ್ದೇವೆ. ನಾವು ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯ ಯುವಕ ಹಾಗೂ ಯುವತಿಯರು ಹಾಗೂ ಕರ್ನಾಟಕದಾದ್ಯಂತ ಜಿಲ್ಲೆಗಳ ವಿದ್ಯಾರ್ಥಿಗಳು ನಮ್ಮ ಶುಲ್ಕಗಳನ್ನು ಪಾವತಿಸುತ್ತಾರೆ, ಪೋಷಕರು ನಮ್ಮ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಾರೆ ಮತ್ತು ಗೃಹಿಣಿತರು ನಮ್ಮ ಕುಟುಂಬಗಳಿಗೆ ಕೊಡುಗೆ ನೀಡುತ್ತಾರೆ. ನಾವು ಈ ಕೆಲಸವನ್ನು ಸ್ವಾತಂತ್ರ್ಯ, ಅನುಕೂಲ ಮತ್ತು ಗೌರವದ ಅಮೂಲ್ಯವಾದುದು ಎಂದು ಕಾಣುತ್ತಿದ್ದೇವೆ.
ಈ ಉದ್ಯೋಗವು ನಮಗೆ ಶಕ್ತಿ ನೀಡಿದೆ. ಸರಾಸರಿ ಮಾಸಿಕ ಆದಾಯ ₹30,000 ರಿಂದ ₹35,000 ಪಡೆಯುವ ಮೂಲಕ ನಾವು ನಮ್ಮ ಕಾಲುಗಳ ಮೇಲೆ ನಿಂತಿದ್ದೇವೆ, ನಮ್ಮ ಮಕ್ಕಳ ಶಿಕ್ಷಣಕ್ಕೆ ಉಳಿತಾಯ ಮಾಡುತ್ತಿದ್ದೇವೆ ಮತ್ತು ವೃದ್ಧ ಪೋಷಕರ ಆರೈಕೆ ಮಾಡುತ್ತಿದ್ದೇವೆ. ನಮ್ಮಲ್ಲಿ ಹಲವರು ನಿರುದ್ಯೋಗಿಗಳು ಅಥವಾ ಹಿಂದೆ ದಿನಗೂಲಿ ಕೆಲಸಗಳನ್ನು ಮಾಡುತ್ತಿದ್ದರು. ನಮ್ಮಲ್ಲಿ ಕೆಲವರು ಉದ್ಯೋಗದ ಹುಡುಕಾಟದಲ್ಲಿದ್ದು ಬೈಕ್ ಟ್ಯಾಕ್ಸಿಗಳು ನಮಗೆ ಮನೆಗೆ ಹಿಂದಿರುಗಲು ಮತ್ತು ನಮ್ಮದೇ ಆದ ನಗರಗಳಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿದೆ.
ನಮ್ಮಲ್ಲಿ ಶೇ.80ರಷ್ಟು ಮಂದಿ ಕನ್ನಡಿಗರು ಎಂದು ವಿನೀತವಾಗಿ ತಿಳಿಸಲು ಬಯಸುತ್ತೇವೆ. ಇದು ನಮ್ಮ ಕೆಲಸ. ಇದು ಯಾರ ಮೇಲೂ ಆಧಾರಪಡದೆ ತಮಗಾಗಿ ಏನನ್ನಾದರೂ ನಿರ್ಮಿಸಿಕೊಳ್ಳಲು ಪ್ರಯತ್ನಿಸುವ ಈ ರಾಜ್ಯದ ಯುವಜನರಿಗೆ ಸೇರಿದೆ. ಅದೇ ರೀತಿಯ ಕೆಲಸವನ್ನು ಡೆಲಿವರಿ ಸೇವೆಗಳಿಗೆ ಮುಕ್ತವಾಗಿ ಅದೇ ಬಗೆಯ ವಾಹನ ಬಳಸಿ ಮಾಡುತ್ತಿರುವಾಗ ನಮ್ಮನ್ನು ಹೊರತಳ್ಳುವ ನೀತಿಗಳನ್ನು ಕಂಡಾಗ ನಾವು ಗೊಂದಲ ಮತ್ತು ಆಘಾತಗೊಳ್ಳುತ್ತಿದ್ದೇವೆ. ನಾವು ಘನತೆಯಿಂದ ಗಳಿಸುವ ಹಕ್ಕು ಕೇಳಿದಾಗ ನಮ್ಮ ಕೆಲಸವನ್ನು ಏಕೆ ವಿಭಿನ್ನವಾಗಿ ನೋಡಲಾಗುತ್ತಿದೆ?
ಅಸ್ಪಷ್ಟ ನೀತಿಗಳು ನಮಗೆ ಆಳವಾಗಿ ಹಾನಿಯುಂಟು ಮಾಡುವುದರಿಂದ ನಮ್ಮ ಉದ್ಯೋಗಗಳನ್ನು ಕೊಂಡೊಯ್ಯಲಾಗುತ್ತದೆ ಮತ್ತು ಹೊರಗಡೆಯ ಕೆಲಸಗಾರರಿಗೆ ನೀಡಲಾಗುತ್ತದೆ ಎಂಬ ಭಾವನೆ ಇದೆ. ನಾವು ಡೆಲಿವರಿ ಕೆಲಸಗಾರರ ವಿರುದ್ಧವಿಲ್ಲ. ನಾವು ನಮ್ಮ ಹಕ್ಕುಗಳನ್ನು ನ್ಯಾಯಯುತ ಮತ್ತು ಸಹಾನುಭೂತಿಯಿಂದ ರಕ್ಷಿಸಬೇಕು ಎಂದಷ್ಟೇ ಕೇಳಿಕೊಳ್ಳುತ್ತಿದ್ದೇವೆ. ಡೆಲಿವರಿ ಸೇವೆಗಳಿಗೆ ಬಳಸುವ ದ್ವಿಚಕ್ರ ವಾಹನಗಳನ್ನು ಮುಕ್ತವಾಗಿ ಬಿಳಿ ಬಣ್ಣದ ನಂಬರ್ ಪ್ಲೇಟ್ ಗಳ ಅಡಿಯಲ್ಲಿ ಮುಕ್ತವಾಗಿ ಕಾರ್ಯಾಚರಿಸಲು ಅವಕಾಶ ನೀಡಿದ್ದು ಅದೇ ವಾಹನಗಳನ್ನು ಬಳಸಿ ಅದೇ ವಾಣಿಜ್ಯ ಉದ್ದೇಶಗಳಿಗೆ ಪ್ರಯಾಣಿಕರ ಸಾರಿಗೆಗೆ ಕಾರ್ಯಾಚರಿಸುವ ನಮ್ಮನ್ನು ಮಾತ್ರ ನಿರ್ಬಂಧಿಸುವುದು ಏಕೆಂದು ಅರ್ಥ ಮಾಡಿಕೊಳ್ಳುವುದು ಕಷ್ಟಕರ. ಎರಡೂ ಗಿಗ್ ಅರ್ಥವ್ಯವಸ್ಥೆಯ ಉದ್ಯೋಗಗಳು ದ್ವಿಚಕ್ರ ವಾಹನಗಳ ವಾಣಿಜ್ಯ ಬಳಕೆಯನ್ನು ಒಳಗೊಂಡಿವೆ ಮತ್ತು ಎರಡೂ ಅದೇ ಮೋಟಾರ್ ವಾಹನಗಳ ಕಾಯ್ದೆಗೆ ಒಳಪಡುತ್ತವೆ. ನಾವು ಸರ್ಕಾರದ ನೀತಿಗೆ ಬದ್ಧವಾಗಿರಲು ಇಚ್ಛಿಸುತ್ತೇವೆ. ಹಾಗಿದ್ದಲ್ಲಿ ಏಕೆ ಈ ತಾರತಮ್ಯ? ಅದೇ ದಾರಿಯಲ್ಲಿ ಅದೇ ಬಗೆಯ ಬೈಕ್ ಬಳಸಿ ಫುಡ್ ಪಾರ್ಸಲ್ ನೀಡುವ ಯಾರೋ ಒಬ್ಬರು ಮುಕ್ತವಾಗಿ ಸಂಚರಿಸುತ್ತಿರುವಾಗ ಬೈಕ್ ಟ್ಯಾಕ್ಸಿ ರೈಡರ್ ಆಗಿ ಕೆಲಸ ಮಾಡುವ ಕನ್ನಡಿಗ ರೈಡರ್ ಏಕೆ ದಂಡ ಪಾವತಿಸಬೇಕು? ಈ ತಾರತಮ್ಯ ನಮ್ಮ ಜೀವನೋಪಾಯಗಳಿಗೆ ಬೆದರಿಕೆ ಒಡ್ಡಿರುವುದೇ ಅಲ್ಲದೆ ಸ್ಥಳೀಯ ಯುವಜನರಿಗೆ ಈ ನಿರಂಕುಶ ಕಾನೂನಿನ ವ್ಯತ್ಯಾಗಳಿಂದ ಅವಕಾಶಗಳಿಂದ ವಂಚಿತರನ್ನಾಗಿಸಿದೆ. ನಾವೆಲ್ಲರೂ ಎಲ್ಲ ಬಗೆಯ ಪ್ರಾಮಾಣಿಕ ಕೆಲಸಗಳನ್ನು ಗೌರವಿಸುವ ನ್ಯಾಯಯುತ ಮತ್ತು ಪಾರದರ್ಶಕ ನೀತಿಯ ಅಡಿಯಲ್ಲಿ ಸಮಾನವಾಗಿ ನೋಡುವುದನ್ನು ಬಯಸುತ್ತೇವೆ.
ನಾವು ಸಾರ್ವಜನಿಕರಿಗೆ ಸೇವೆ ಒದಗಿಸುವುದಕ್ಕೆ ಹೆಮ್ಮೆ ಪಡುತ್ತೇವೆ. ಬೈಕ್ ಟ್ಯಾಕ್ಸಿಗಳು ನಮ್ಮ ಮೇಲೆ ಪ್ರತಿನಿತ್ಯ ಆಧಾರಪಡುವ ಲಕ್ಷಾಂತರ ಮಂದಿಗೆ ಅತ್ಯಗತ್ಯವಾಗಿವೆ. ಅದು ಕಾಲೇಜಿಗೆ ಸಂಚರಿಸುತ್ತಿರುವ ವಿದ್ಯಾರ್ಥಿಯಾಗಿರಲಿ ಅಥವಾ ರಾತ್ರಿಯಲ್ಲಿ ಮನೆಗೆ ಸುರಕ್ಷಿತವಾಗಿ ತಲುಪಲು ಬಯಸುವ ಉದ್ಯೋಗಸ್ಥ ಮಹಿಳೆಯಾಗಿರಲಿ ನಾವು ಅವರ ವಿಶ್ವಾಸಾರ್ಹ ರೈಡ್ ಆಗಿದ್ದೇವೆ.
ಮಾನ್ಯರೇ, ನಾವು ನಮಗೆ ಉಪಕಾರ ಮಾಡಿ ಎಂದು ಕೇಳುತ್ತಿಲ್ಲ. ನಾವು ನಮ್ಮದೇ ಆದ ಜೀವನೋಪಾಯಗಳ ಕುರಿತಾದ ಸಂವಹನದಲ್ಲಿ ನಮ್ಮ ಮಾತುಗಳನ್ನೂ ಕೇಳಿಸಿಕೊಳ್ಳಿ ಎಂದಷ್ಟೇ ಕೋರುತ್ತೇವೆ. ನಮ್ಮಿಂದ ಪಡೆದ ಮಾಹಿತಿಯನ್ನು ಆಧರಿಸಿ ರೂಪಿಸುವ ನೀತಿಯು ನೈಜ ವಾಸ್ತವಗಳನ್ನು ಬಿಂಬಿಸುತ್ತದೆ ಮತ್ತು ಸರ್ಕಾರ, ಅಗ್ರಿಗೇಟರ್ ಗಳು, ರೈಡರ್ ಗಳು ಮತ್ತು ನಾವು ಸೇವೆ ಒದಗಿಸುವ ಜನರು ಎಲ್ಲರಿಗೂ ನ್ಯಾಯ ಮತ್ತು ಸುಸ್ಥಿರತೆ ತರುತ್ತದೆ.
ನಾವು ಯಾವುದೇ ಕಾನೂನಿನ ಅಡಿಯಲ್ಲಿ ಕೆಲಸ ಮಾಡಲು ಸಿದ್ಧರಿದ್ದೇವೆ. ನಾವು ಕೇಳುವುದೆಲ್ಲ ನಮ್ಮನ್ನು ಘನತೆಯಿಂದ ನೋಡುವ ಮತ್ತು ನಮ್ಮ ಏಕೈಕ ಜೀವನೋಪಾಯವನ್ನು ದೂರ ಕೊಂಡೊಯ್ಯದೇ ಇರುವ ಕಾನೂನು.
ನಿಮ್ಮ ಸಮಯ ನಮಗೆ ನೀಡಿದ್ದಕ್ಕಾಗಿ ಹಾಗೂ ಎಲ್ಲರನ್ನೂ ಒಳಗೊಳ್ಳುವ ಕರ್ನಾಟಕ ನಿರ್ಮಾಣಕ್ಕೆ ನಿಮ್ಮ ಬದ್ಧತೆಗೆ ಹೃದಯಾಂತರಾಳದಿಂದ ಕೃತಜ್ಞತೆ ಸಲ್ಲಿಸುತ್ತೇವೆ. ನಾವು ನಮ್ಮ ಭವಿಷ್ಯವನ್ನು ವಿಶ್ವಾಸ, ಭರವಸೆ ಮತ್ತು ಗೌರವದಿಂದ ನಿಮ್ಮ ಕೈಯಲ್ಲಿರಿಸಿದ್ದೇವೆ.
ನಿಮ್ಮ ಅಮೂಲ್ಯ ಸಮಯ ಮತ್ತು ಪರಿಗಣನೆಗೆ ನಾವು ಆಭಾರಿಯಾಗಿದ್ದೇವೆ.
ನಾವು ಗೌರವಯುತವಾಗಿ ಕೇಳುವುದು: ದಯವಿಟ್ಟು ನಮ್ಮ ಬೈಕ್ ಗಳನ್ನು ಕಿತ್ತುಕೊಳ್ಳಬೇಡಿ. ನಮ್ಮ ಜೀವನೋಪಾಯಗಳನ್ನು ಕಸಿದುಕೊಳ್ಳಬೇಡಿ ಎಂದಿದ್ದಾರೆ.