ಡಾ| ಕೆ.ಎನ್.ವೆಂಕಟ್ರಮಣ ಹೊಳ್ಳ ನಿರ್ದೇಶಕರಾಗಿ ಆಯ್ಕೆ

0
10

ಕಾಸರಗೋಡು: ಡಾ| ವಾಮನ್ ರಾವ್ ಬೇಕಲ್ ಸ್ಥಾಪಕ ಸಂಚಾಲಕರಾಗಿರುವ ಕೇರಳರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯ ನಿರ್ದೇಶಕರಾಗಿ ಕಾಸರಗೋಡಿನ ಡಾ| ಕೆ.ಎನ್ ವೆಂಕಟ್ರಮಣ ಹೊಳ್ಳ ಇವರನ್ನು ಕೇಂದ್ರ ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಇವರು ಬಿ.ಇ.ಎಂ. ಹೈಸ್ಕೂಲಿನ ಸಾರ್ವಜನಿಕ ಶಿಕ್ಷಣ ಸಂರಕ್ಷಣ ಯಜ್ಙದ ಅಧ್ಯಕ್ಷರು, ಬಾಲಭವನ ಶಾಲೆಯ ಅಕಾಡೆಮಿಕಲ್ ಸ¯ಹೆಗಾರರಾಗಿದ್ದಾರೆ. ಅವರ ಸಮಗ್ರ ಸಾಧನೆಯನ್ನು ಗುರುತಿಸಿ ನೂರಾರು ಸಂಘ ಸಂಸ್ಥೆಗಳು ಪ್ರಶಸ್ತಿ, ಪುರಸ್ಕಾರ, ಸನ್ಮಾನ ನೀಡಿ ಇವರನ್ನು ಗೌರವಿಸಿದೆ. ಕಾಸರಗೋಡಿನಲ್ಲಿ ಶ್ರೀ ವೆಂಕಟ್ರಮಣಸ್ವಾಮಿ ಕೃಪಾಶ್ರಿತ ಯಕ್ಷಗಾನ ಸಂಶೋಧನಾ, ತರಬೇತಿ ಕೇಂದ್ರ ಸ್ಥಾಪಿಸಿ ನಾಲ್ಕು ದಶಕಗಳ ಕಾಲಾವಧಿಯಲ್ಲಿ ಇವರು ನೂರಾರು ಪ್ರತಿಭೆಗಳನ್ನು ವೇದಿಕೆಗೆ ತಂದಿದ್ದಾರೆ. ವೇಷಧಾರಿಯಾಗಿ, ಹಿಮ್ಮೇಳ ಕಲಾವಿದರಾಗಿ, ವೇಷಭೂಷಣ ವಿನ್ಯಾಸಕಾರರಾಗಿ ಜನಪ್ರಿಯರಾಗಿದ್ದಾರೆ.
ಇವರಿಗೆ ಇತ್ತೀಚೆಗೆ ಕಾಸರಗೋಡು ಕನ್ನಡ ಭವನದಲ್ಲಿ ಕೇರಳರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮದಲ್ಲಿ ಗೌರವಾರ್ಪಣೆ ನೀಡಿ ಕೇಂದ್ರ ಸಮಿತಿಯಲ್ಲಿ ಇವರ ಪದಗ್ರಹಣ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಸಂಚಾಲಕರಾದ ಡಾ| ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅಥಿತಿಗಳಾಗಿ ಕೊಡಗು ಕನ್ನಡ ಭವನ ಅಧ್ಯಕ್ಷರಾದ ಬೊಳಜೀರ ಬಿ.ಅಯ್ಯಪ್ಪ, ಕಾಸರಗೋಡು ಜಿಲ್ಲಾ ಅಧ್ಯಕ್ಷ ವಿರಾಜ್ ಅಡೂರು, ಕೊಡಗು ಜಿಲ್ಲಾ ಅಧ್ಯಕ್ಷರಾದ ರುಬೀನಾ ಎಂ.ಎ, ಕನ್ನಡ ಭವನ ಸಂಚಾಲಕರಾದ ಸಂಧ್ಯಾರಾಣಿ ಟೀಚರ್, ಕನ್ನಡ ಸಾಹಿತ್ಯ ಪರಿಷತ್ ಸಂಘಟನಾ ಕಾರ್ತದರ್ಶಿ ವಿಶಾಲಾಕ್ಷ ಪುತ್ರಕಳ ಕನ್ನಡ ಭವನ ಕಾರ್ಯದರ್ಶಿ ವಸಂತ್ ಕೆರೆಮನೆ ಮತ್ತನೇಕ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here