ಸುಬ್ರಹ್ಮಣ್ಯ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0
118


ವರದಿ ರಾಯಿ ರಾಕುಮಾರ
ಮಂಗಳೂರಿನಲ್ಲಿ ಪ್ರಧಾನ ಕಛೇರಿ ಹೋಗಿರುವ ಸುಬ್ರಮಣ್ಯ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಸಪ್ಟಂಬರ್ 21 ರಂದು ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕರುಣ್ ರಾವ್ ಬೆಳ್ಳೆ ಮಾತನಾಡಿ ಸಂಘದ ಅಭಿವೃದ್ಧಿಗಾಗಿ ಎಲ್ಲರೂ ಪ್ರಮಾಣಿಕವಾಗಿ ದುಡಿಯುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಲಾಭ, ಬಂಡವಾಳ ಎಲ್ಲವನ್ನೂ ಹೆಚ್ಚಿಸಿ, ಹೆಚ್ಚು ಶಾಖೆಗಳನ್ನು ತೆರೆಯಲಾಗುತ್ತಿದೆ ಎಂದು ಪ್ರಾಸ್ತಾವಿಕ ವಿವರ ತಿಳಿಸಿ, ಸ್ವಾಗತಿಸಿದರು.


ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಯಿ ಪ್ರಸಾದ್ ಎಂ ವರದಿ ಮಂಡಿಸಿದರು. ಮೂಡುಬಿದಿರೆ ವ್ಯವಸ್ಥಾಪಕ ಸಂದೀಪ್ ಲೆಕ್ಕಪತ್ರ ಮಂಡಿಸಿದರು. ಬೆಳ್ತಂಗಡಿ ವ್ಯವಸ್ಥಾಪಕ ವಿವೇಕ್ ಆಯವ್ಯಯ ಮಂಡಿಸಿದರು. ವಿಟ್ಲ ವ್ಯವಸ್ಥಾಪಕ ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಎನ್ ಎಸ್ ನಟರಾಜ್, ನಿರ್ದೇಶಕರುಗಳಾದ ಉದಯಕುಮಾರ್, ನಾಗರಾಜ ರಾವ್, ರಾಮಪ್ರಸಾದ್, ಕನಕವಲ್ಲಿ ಕೇದಿಗೆ, ಶ್ರೀಕಾಂತ ರಾವ್, ರಾಘವೇಂದ್ರ ರಾವ್, ಹರಿಶ್ಚಂದ್ರ ರಾವ್, ನಾಗೇಶ್ ರಾವ್, ಹಾಗೂ ಇತರರು ಹಾಜರಿದ್ದರು. ಪ್ರಕಾಶ್ ಚಂದ್ರ, ರಾಘವೇಂದ್ರ ಭಟ್, ಕಾರ್ತಿಕ್ ಬೆಳಿರಾಯ, ಹರೀಶ್ ಕುಮಾರ್ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ನಿರ್ದೇಶಕ ಉದಯಕುಮಾರ್ ರಾವ್ ವಂದಿಸಿದರು.

LEAVE A REPLY

Please enter your comment!
Please enter your name here