ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವ ಹಾಗೂ ಪರಿವಾರ ದೈವಗಳ ಸಿರಿಸಿಂಗಾರ ನರ್ತನ

0
42

ಬೆಳಾಲು : (ಡಿ. 18)ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನ ಇದರ ವಾರ್ಷಿಕ ಜಾತ್ರಾಮಹೋತ್ಸವ ಹಾಗೂ ಪರಿವಾರ ದೈವಗಳ ಸಿರಿಸಿಂಗಾರ ನರ್ತನ ಸೇವೆಯು ಡಿಸೆಂಬರ್ 24 ಮತ್ತು 25 ರಂದು ನಡೆಯಲಿದ್ದು , ಆ ಸಲುವಾಗಿ ಧಾರ್ಮಿಕ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಉಜಿರೆ ಲಕ್ಷ್ಮೀ ಗ್ರೂಪ್ಸ್ ಕನಸಿನ ಮನೆ ಇದರ ಮಾಲಕರಾದ ಶ್ರೀ ಮೋಹನ್ ಕುಮಾರ್ ಉಜಿರೆ ಇವರನ್ನು ಭೇಟಿ ನೀಡಿ ಕ್ಷೇತ್ರದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ನೀಡಲಾಯಿತು.ಈ ಸಮಯದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ್ ಗೌಡ, ಅಸ್ರಣ್ಣರಾದ ಗಿರೀಶ್ ಬಾರಿತ್ತಾಯ ಪಾರಲ,ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೆರ್ಮುಣ್ಣಾಯ,ಕಾರ್ಯದರ್ಶಿ ಸತೀಶ್ ಗೌಡ ಎಳ್ಳುಗದ್ದೆ, ಜಾತ್ರೋತ್ಸವ ಸಮಿತಿಯ ಪ್ರಧಾನ ಸಂಚಾಲಕರಾದ ಲಿಂಗಪ್ಪ ಪೂಜಾರಿ ಬನಂದೂರು, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷರು,ಮಹಿಳಾ ಸಮಿತಿ ಗೌರವಾಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ,ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬೆಳಾಲು ಇದರ ಗೌರವಾಧ್ಯಕ್ಷರಾದ ಶ್ರೀ ಶಿವಕುಮಾರ ಬಾರಿತ್ತಾಯ, ಸೀತಾರಾಮ ಬೆಳಾಲು ಮತ್ತು ಸಮಿತಿಯ ಸದಸ್ಯರು ಉಪಸ್ತಿತರಿದ್ದರು.

LEAVE A REPLY

Please enter your comment!
Please enter your name here