ಅಂಬ್ಯುಲೆನ್ಸ್ ಆಟೋ ಡಿಕ್ಕಿ – ಬನ್ನಡ್ಕದಲಲಿ ಮುಂದುವರಿದ ಸರಣಿ ಅಪಘಾತ

ಮೂಡುಬಿದಿರೆ: ಕಾರ್ಕಳ-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ ಎಂಬಲ್ಲಿ ಅಪಘಾತಗಳು ನಡೆಯುತ್ತಿದ್ದು ಇಂದು ಮಧ್ಯಾಹ್ನದ ಸುಮಾರಿಗೆ ರಾಘವೇಂದ್ರ ಮಠದ ಬಳಿ ಆಂಬ್ಯುಲೆನ್ಸ್ ಮತ್ತು ರಿಕ್ಷಾದ ನಡುವೆ ಅಪಘಾತ ಸಂಭವಿಸಿದ ಘಟನೆ ನಡೆದಿದೆ. ಭೀಕರ ಅಪಘಾತದಲ್ಲಿ ಆಟೋ ಚಾಲಕ ಜಾನ್ ಕೊರೆಯಾ ಸ್ಥಳದಲ್ಲೇ ಮೃತಟ್ಟಿದ್ದಾರೆ..

ಕಾರ್ಕಳ ಕಡೆಗೆ ಹೋಗುವ ವಾಹನಗಳಾಗಿದ್ದು, ಬನ್ನಡ್ಕ ಮಠದಲ್ಲಿ ನಡೆಯುತ್ತಿದ್ದ ಸಮಾರಂಭವೊಂದಕ್ಕೆ ಪ್ರಯಾಣಿಕರನ್ನು ಬಿಟ್ಟು ಆಟೋ ರಿಕ್ಷಾವನ್ನು ಹಿಂದಕ್ಕೆ (ರಿವರ್ಸ್) ತೆಗೆಯುತ್ತಿದ್ದ ಸಂದರ್ಭದಲ್ಲಿ, ಮೂಡುಬಿದಿರೆ ಕಡೆಯಿಂದ ಕಾರ್ಕಳಕ್ಕೆ ಅತೀ ವೇಗವಾಗಿ ತೆರಳುತ್ತಿದ್ದ ಅಂಬ್ಯುಲೆನ್ಸ್ ಡಿಕ್ಕಿಯಾಗಿದೆ. ರಿಕ್ಷಾ ಸಂಪೂರ್ಣವಾಗಿ ನಜ್ಜು ಗುಜ್ಜಾಗಿತ್ತು, ಅಂಬ್ಯುಲೆನ್ಸ್‌ನ ಮುಂಭಾಗ ಕೂಡ ಜಖಂಗೊಂಡಿದೆ. ಇನಷ್ಟು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಬನ್ನಡ್ಕ ಪ್ರದೇಶದಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿದ್ದು ಈ ಬಗ್ಗೆ ಎಚ್ಚರ ವಹಿಸಬೇಕಾಗಿದೆ.

