ನಮ್ಮ ನಾಡ ಒಕ್ಕೂಟದ ಹೆಬ್ರಿ ಘಟಕದ 2024-2 5ನೇ ಸಾಲಿನ ವಾರ್ಷಿಕ ಮಹಾಸಭೆಯ ಬೆಳ್ವೆ ಶ್ರೀ ಸಂದೇಶ್ ಕಿಣಿ ಮೆಮೋರಿಯಲ್ಸ ಸಬಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ನಮ್ಮ ನಾಡ ಒಕ್ಕೂಟ ಹೆಬ್ರಿ ಘಟಕ ಅಧ್ಯಕ್ಷ ಮೊಹಮ್ಮದ್ ರಫೀಕ್ ಅಜೆಕಾರು ವಹಿಸಿ 2024- 25ನೇ ಸಾಲಿನ ವರದಿಯನ್ನು ಮಂಡಿಸಿದರು.2026- 27ನೇ ಸಾಲಿನ ನೂತನ ಹೆಬ್ರಿ ಘಟಕ ಚುನಾವಣೆಯನ್ನು ಜಿಲ್ಲಾ ಉಪಾಧ್ಯಕ್ಷ ಮುನಾವರ್ ಅಜೆಕಾರು , ಕುಂದಾಪುರ ತಾಲೂಕು ಅಧ್ಯಕ್ಷ ಜಮಾಲ್ ಗುಲ್ವಾಡಿ, ಜಿಲ್ಲಾ ಸಮಿತಿಯ ಸದಸ್ಯರಾದ ಹರೂನ್ ರಶೀದ್ ಸಾಸ್ತಾನ , ಶಾಕಿರ್ ಹಾವಂಜೆ, ಮುಸ್ತಫಾ ಕಾರ್ಕಳ, ನಡೆಸಿಕೊಟ್ಟರು.ನೂತನ 2026- 27ನೇ ಸಾಲಿನ ಹೆಬ್ರಿಘಟಕ ಅಧ್ಯಕ್ಷರಾಗಿ ಅನ್ಸಾರ್ ಹೊಸಂಗಡಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶರೀಫ್ ಸಾಹೇಬ್ ಬೆಳ್ವೆ , ಪ್ರದಾನ ಕಾರ್ಯದರ್ಶಿಯಾಗಿ ಅರಾಫತ್ ಅಲ್ಬಾಡಿ ಕೋಶಾಧಿಕಾರಿಯಾಗಿ ಮೊಹಮ್ಮದ್ ರಯಾನ್, ಸಂಘಟನಾ ಕಾರ್ಯದರ್ಶಿಯಾಗಿ ಮುಸ್ತಾಕ್ ಹೆನ್ನಾಬೈಲ್,ಜೊತೆ ಕಾರ್ಯದರ್ಶಿ ಯಾಗಿ ಫಾರ್ಮ್ನ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮೊಹಮ್ಮದ್ ರಫೀಕ್ ಅಜೆಕಾರು, ಅಬ್ದುಲ್ ಶುಕುರ್ ಬೆಳ್ವೆ, ಅಹಮದ್ ಬ್ಯಾರಿ,ಮೊಹಮ್ಮದ್ ರಬಿ, ಜಾಸಿಂ , ಇಮ್ತಿಯಾಜ್ , ಸೈಯದ್ ರಫಿಕ್, ಅಬ್ದುಲ್ , ದಾದಫೀರ್, ರಜಬ್ ಜನ್ಸಾಲೆ,ಲತೀಫ್ ,ಆಯ್ಕೆಯಾದರು. ಫೀರ್ ಸಾಹೇಬ್ ಉಡುಪಿ ಕೋಶಾಧಿಕಾರಿ , ನಮ್ಮ ನಾಡ ಒಕ್ಕೂಟ ಸೆಂಟ್ರಲ್ ಕಮಿಟಿ ,ನಮ್ಮ ನಾಡ ಒಕ್ಕೂಟದ ಉಡುಪಿ ಜಿಲ್ಲಾ ಮಾಜಿ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ ಉಪಸ್ಥಿರಿದ್ದರು. ಹೆಬ್ರಿ ಘಟಕದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಶುಕುರ್ ಬೆಳ್ವೆ ಸಹಕರಿಸಿದರು. ಮೊಹಮ್ಮದ್ ರಬಿ ಕಿರಾತ್ ಪಠಿಸಿದರು.ರಯಾನ್ ಬೆಳ್ವೆ ಕಾರ್ಯಕ್ರಮ ನಿರೂಪಿಸಿದರು.ಅರಾಫತ್ ಸ್ವಾಗತಿಸಿ ವಂದಿಸಿದರು. ಬೆಳ್ವೆ ಮಸೀದಿಯ ಖತೀಬರಾದ ಮೌಲಾನಾ ಮೊಹಮ್ಮದ್ ರಫೀಕ್ ಬೆಳ್ವೆ ದುವಾ ನೆರವೇರಿಸಿದರು.

