ಉಡುಪಿ: ಕೇರಳ, ಮಂಗಳೂರು ಗೋವಾ ಮೂಲಕ ಮಹಾರಾಷ್ಟ್ರ ತಲುಪುವ ರೈಲ್ವೆ ಮಾರ್ಗ ಅಭಿವೃದ್ಧಿಪಡಿಸಿ ದ್ವಿಪಥಗೊಳಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಕೊಂಕಣ ರೈಲ್ವೆ ಏಕಪಥ ಹಳಿಯನ್ನು ಹೊಂದಿರುವುದರಿಂದ ಹೊಸ ರೈಲುಗಳನ್ನು ಓಡಿಸಲಾಗದ ಒತ್ತಡವಿದೆ. ರೈಲ್ವೆ ಹಳಿಗಳ ದ್ವಿಪಥ ಮತ್ತು ಆಧುನಿಕರಣ ಮಾಡಲು ಸಹಜವಾಗಿಯೆ ಕೊಂಕಣ ರೈಲ್ವೆ ಅನುದಾನದ ಕೊರತೆ ಅನುಭವಿಸುತ್ತಿದೆ. ಇದರಿಂದ ಕೊಂಕಣ ರೈಲ್ವೆ ಮಾರ್ಗ ಮತ್ತು ನಿಲ್ದಾಣ ಅಭಿವೃದ್ಧಿಗೆ ತೊಡಕಾಗಿದೆ. ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ಕೇರಳ, ಗೋವಾ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಕೂಡ ಸಮ್ಮತಿಸುವ ಭರವಸೆ ಇದೆ. ಕೊಂಕಣ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನ ವಿಳಂಬವಾದರೆ ಪ್ರಯಾಣಿಕರ ಹಿತದೃಷ್ಟಿಯಿಂದ ಮಂಗಳೂರು, ಮುಂಬೈವರೆಗೆ ಹಳಿಗಳ ದ್ವಿಪಥ ಕಾಮಗಾರಿ ಕೈಗತ್ತಿಕೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

