Saturday, June 14, 2025
HomeUncategorizedಬೈಕ್ ಟ್ಯಾಕ್ಸಿ ಸೇವೆಗಳನ್ನು ನಿರ್ವಹಿಸಲು ಸೂಕ್ತವಾದ ನಿಯಮಗಳ ಚೌಕಟ್ಟನ್ನು ರೂಪಿಸಬೇಕು ಮನವಿ

ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿರ್ವಹಿಸಲು ಸೂಕ್ತವಾದ ನಿಯಮಗಳ ಚೌಕಟ್ಟನ್ನು ರೂಪಿಸಬೇಕು ಮನವಿ

ಒಗ್ಗಟ್ಟು ಹಾಗೂ ಉದ್ದೇಶದ ಶಾಂತಿಯುತ ಪ್ರದರ್ಶನದಲ್ಲಿ ಬೈಕ್ ಟ್ಯಾಕ್ಸಿ ಅಸೋಸಿಯೇಷನ್ (ಬಿಟಿಎ) ಪ್ರತಿನಿಧಿಸುವ 100ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿ ಚಾಲಕರು ಇಂದು (ಮೇ 17, 2025ರಂದು) ಬೆಂಗಳೂರಿನಲ್ಲಿ ಮಾನ್ಯ ಸಾರಿಗೆ ಸಚಿವರ ಕಛೇರಿಯ ಬಳಿ ಒಗ್ಗೂಡಿ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿರ್ವಹಿಸಲು ಸೂಕ್ತವಾದ ನಿಯಮಗಳ ಚೌಕಟ್ಟನ್ನು ರೂಪಿಸಬೇಕು ಎಂದು ಔಪಚಾರಿಕ ಮನವಿ ಸಲ್ಲಿಸಿದರು.
ಈ ಮನವಿ ಸಲ್ಲಿಕೆಯು 6 ಲಕ್ಷಕ್ಕೂ ಹೆಚ್ಚು ಕನ್ನಡದ ರೈಡರ್ ಗಳ ತುರ್ತು ಜೀವನೋಪಾಯದ ಅಗತ್ಯಗಳ ಕುರಿತು ಒತ್ತು ನೀಡಿದ್ದು ಶೇ.75ರಷ್ಟು ಮಂದಿ ತಮ್ಮ ಪ್ರಾಥಮಿಕ ಆದಾಯದ ಮೂಲವಾಗಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಂಬಿಕೊಂಡಿದ್ದಾರೆ. ಚಾಲಕರು ನ್ಯಾಯಯುತ, ಒಳಗೊಳ್ಳುವ ಮತ್ತು ಸುಸ್ಥಿರ ನಿಯಂತ್ರಣದ ಚೌಕಟ್ಟು ರೂಪಿಸಲು ಗೌರವಯುತವಾಗಿ ಮನವಿ ಮಾಡಿದ್ದು ರಾಜ್ಯದ ಮೊಬಿಲಿಟಿ ಇಕೊಸಿಸ್ಟಂನಲ್ಲಿ ಬೈಕ್ ಟ್ಯಾಕ್ಸಿಗಳು ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಗುರುತಿಸಬೇಕು ಎಂದರು.


ಅವರ ಮನವಿಯಲ್ಲಿ ಸಂಘವು ಮೋಟಾರು ವಾಹನಗಳ ಕಾಯ್ದೆ, 1988ರ ಪರಿಚ್ಛೇದ 66ರಲ್ಲಿ ವ್ಯಾಖ್ಯಾನಿಸಿದಂತೆ ಅದೇ ಶಾಸನಬದ್ಧ ಚೌಕಟ್ಟಿನಲ್ಲಿ ಬೈಕ್ ಟ್ಯಾಕ್ಸಿಗಳು ಮತ್ತು ಡೆಲಿವರಿ ದ್ವಿಚಕ್ರ ವಾಹನಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು. ಅವರು ಬೈಕ್ ಟ್ಯಾಕ್ಸಿಗಳಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಕೋರಿದ್ದು ಈ ಸೇವೆಗಳು ಬೆಂಗಳೂರಿನಲ್ಲಿಯೇ 20 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಈ ಸೇವೆಗಳು ಬೆಂಬಲಿಸುತ್ತಿದ್ದು 50 ಲಕ್ಷಕ್ಕೂ ಹೆಚ್ಚು ರೈಡ್ ಗಳನ್ನು ಮೊಬಿಲಿಟಿ ಅಗ್ರಿಗೇಟರ್ ಪ್ಲಾಟ್ ಫಾರಂಗಳ ಮೂಲಕ ಕಲ್ಪಿಸಿಕೊಡಲಾಗುತ್ತಿದ್ದು ಅಗತ್ಯ, ಸುರಕ್ಷಿತ, ಕೈಗೆಟುಕುವ ಮತ್ತು ದಕ್ಷತೆಯ ಸಾರಿಗೆ ವಿಧಾನವನ್ನು ಸಾರ್ವಜನಿಕರಿಗೆ ಒದಗಿಸುತ್ತಿದೆ ಎಂದು ಹೇಳಿದರು.
ಬಿಟಿಎ ಶೇ.80ಕ್ಕಿಂತ ಹೆಚ್ಚು ಬೈಕ್ ಟ್ಯಾಕ್ಸಿ ರೈಡರ್ ಗಳಲ್ಲಿ ಸ್ಥಳೀಯ ಕನ್ನಡಿಗ ಪುರುಷರು ಮತ್ತು ಮಹಿಳೆಯರಿದ್ದು ಅವರು ಕಳೆದ 6 ವರ್ಷಗಳಿಂದಲೂ ಬೈಕ್ ಟ್ಯಾಕ್ಸಿಗಳಿಂದ ಗೌರವಯುತವಾಗಿ ಗಳಿಸುತ್ತಿದ್ದಾರೆ ಮತ್ತು ಬೈಕ್ ಟ್ಯಾಕ್ಸಿಗಳ ನಿರ್ವಹಣೆಗೆ ಸರ್ಕಾರ ಪರ್ಮಿಟ್ ಶುಲ್ಕ ಅಥವಾ ತೆರಿಗೆ ವಿಧಿಸಿದರೆ ಅದನ್ನು ಪಾವತಿಸಲು ಸಿದ್ಧರಿದ್ದಾರೆ.
ಇಂದಿನ ಸಭೆಯ ಹೆಚ್ಚುವರಿ ಮಾಹಿತಿ, ಹೇಳಿಕೆಗಳು ಮತ್ತು ದೃಶ್ಯಗಳಿಗೆ ಅಥವಾ ಈ ವಿಷಯದ ಕುರಿತು ವಿಶೇಷ ಬರಹಕ್ಕೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಾವು ನಿಮಗೆ ನೆರವಾಗಲು ಸಂತೋಷಪಡುತ್ತೇವೆ.

RELATED ARTICLES
- Advertisment -
Google search engine

Most Popular