Thursday, April 24, 2025
HomeUncategorizedಬೆಳುವಾಯಿ ಮೂಡಯಿಕಾಡು ಕ್ಷೇತ್ರದಲ್ಲಿ ಬಾಲಾಲಯ ಪ್ರತಿಷ್ಠೆ ಶಾಸಕರಿಗೆ ಮನವಿ

ಬೆಳುವಾಯಿ ಮೂಡಯಿಕಾಡು ಕ್ಷೇತ್ರದಲ್ಲಿ ಬಾಲಾಲಯ ಪ್ರತಿಷ್ಠೆ ಶಾಸಕರಿಗೆ ಮನವಿ

ಬೆಳುವಾಯಿ ಮೂಡಯಿಕಾಡು ನಾಗ ಬ್ರಹ್ಮಲಿಂಗೇಶ್ವರ, ವನದುರ್ಗ ಕ್ಷೇತ್ರ ದೇವಸ್ಥಾನ ಪ್ರದೇಶವನ್ನು ಇಂದು ಊರ ಜನತೆ ಒಂದಾಗಿ ಸೇರಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. ಈ ಕ್ಷೇತ್ರವು ಸುಮಾರು 800 ವರ್ಷಗಳಿಗೂ ಹಿಂದೆ ಬಹಳಷ್ಟು ಪ್ರಖ್ಯಾತವಾಗಿತ್ತು ಎಂದು ತಿಳಿದುಬರುತ್ತದೆ. ಇದೇ ಬರುವ ಏಪ್ರಿಲ್ ಏಳನೇ ತಾರೀಕು ಸೋಮವಾರ ಸಂಜೆಯ ಸಮಯದಲ್ಲಿ ಇದರ ಬಾಲಾಲಯ ಪ್ರತಿಷ್ಠೆ ನೆರವೇರಲಿದೆ ಎಂದು ಶಾಸಕರಿಗೆ ಮನವಿ ಅರ್ಪಿಸಿ ಸಹಕಾರ ಕೋರಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ದೇವಾನಂದ ಭಟ್, ಸೋಮನಾಥ ಕೋಟ್ಯಾನ್, ಸಹ ಕಾರ್ಯದರ್ಶಿ ರೋಶನ್, ಸೂರಜ್ ಆಳ್ವ ಹಾಗು ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular