ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ಯ ವಿವಿಧ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

0
149

ದಾವಣಗೆರೆ – ಜನವರಿ, ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರ ಜನ್ಮ ದಿನವಾದ ಜನವರಿ 12 ರಂದು ‘ರಾಷ್ಟ್ರೀಯ ಯುವ ದಿನಾಚರಣೆಯ ನಿಮಿತ್ಯವಾಗಿ ಕವಿತ್ತ ಕರ್ಮಮಣಿ ಫೌಂಡೇಶನ್ (ರಿ), ನಾಗರಮುನ್ನೋಳಿ ವತಿಯಿಂದ ರಾಷ್ಟ್ರಮಟ್ಟದ ಗೌರವ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಕನ್ನಡ ನಾಡು ನುಡಿ ಮತ್ತು ಇತಿಹಾಸ ಸೇರಿ ಹಲವು ರಂಗಗಳಲ್ಲಿ ಅನವರತವಾಗಿ ಸೇವೆ ಸಲ್ಲಿಸುತ್ತಿರುವವರು ‌

1. ಸಾಹಿತ್ಯ ವಿಭೂಷಣ

2. ವಿದ್ಯಾ ವಿಭೂಷಣ

3. ಜ್ಞಾನ ವಿಭೂಷಣ

4. ಕವಿವಿಭೂಷಣ

5. ಕಲಾ ವಿಭೂಷಣ

6. ಸಂಗೀತ ವಿಭೂಷಣ ಪ್ರಶಸ್ತಿಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ಜೊತೆಗೆ ಹೊಸ ಪ್ರತಿಭೆಗಳು

1. ಬಾಲ ಜ್ಞಾನಶ್ರೀ

2. ಯುವ ಜ್ಞಾನಶ್ರೀ

3. ವಿಶ್ವ ಜ್ಞಾನಶ್ರೀ

4. ಯೋಗ ರತ್ನ ಪ್ರತಿಭಾ

5. ಚೈತನ್ಯ ಶಿರೋಮಣಿ

6. ಯುವ ನಾಯಕ ಪುರಸ್ಕಾರಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಪ್ರತಿಭಾನ್ವಿತ ಸಾಧಕರು ತಮ್ಮ ಪರಿಚಯವನ್ನು ವೇದಿಕೆಯ ಅಧ್ಯಕ್ಷರಾದ ಕವಿತ್ತ ಕರ್ಮಮಣಿ ಅವರ 9743867298 ನಂಬರಿಗೆ ವಾಟ್ಸಾಪ್ ಮಾಡಬಹುದು ಎಂದು ವೇದಿಕೆಯ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here