ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿಗೆ ರಾಷ್ಟ್ರೀಯ ಕೈಗಾರಿಕಾ ಪ್ರಶಸ್ತಿ

0
31

ಮಹಾವೀರಕಾಲೇಜು, ಮೂಡುಬಿದಿರೆ : ಮಹಾವೀರಕಾಲೇಜಿನ ಹಳೆ ವಿದ್ಯಾರ್ಥಿಗೆ ರಾ಼ಷ್ಟ್ರೀಯ ಕೈಗಾರಿಕಾ ಪ್ರಶಸ್ತಿ ಡಿಜಿಟಲ್ ಮಾರ್ಕೆಟಿಂಗ್‌ನಅತ್ಯುತ್ತಮಅಭಿಯಾನಕ್ಕಾಗಿ ಸಿಐಐ (ಕಾನ್‌ಫೆಡರೇಶನ್‌ಆಫ್‌ಇಂಡಿಯನ್ ಇಂಡಸ್ಟ್ರಿ ) ಆಯೋಜಿತ ರಾಷ್ಟ್ರೀಯ ಸ್ಪರ್ಧೆಯಲ್ಲಿ ಅಗ್ರ ಪ್ರಶಸ್ತಿಯನ್ನು ಶ್ರೀ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿ ಮತ್ತು ಮೈಂಡ್‌ಫುಲ್‌ಕನ್ಸಲ್ಟಿಂಗ್, ಮಂಗಳೂರು ಇದರ ಸಂಸ್ಥಾಪಕ ಸಂಜಯ್ ಭಟ್‌ ಅವರು ಗೆದ್ದಿದ್ದಾರೆ.ದೇಶದಾದ್ಯಂತ ನೋಂದಾಯಿತ 205 ಎಂಟ್ರಿಗಳ ಕಟ್ಟುನಿಟ್ಟಿನ ಮೌಲ್ಯಮಾಪನದ ನಂತರ, ಮೈಂಡ್‌ಫುಲ್‌ಕನ್ಸಲ್ಟಿಂಗ್‌ನ ಈ ಉಪಕ್ರಮವು ಭಾರತದ 33 ಅತಿ ಶ್ರೇಷ್ಠ ಕಾರ್ಯ ವಿಧಾನಗಳಲ್ಲಿ ಒಂದಾಗಿ ಆಯ್ಕೆಯಾಗಿದೆ .

ಸ್ತನ ಕ್ಯಾನ್ಸರ್‌ ತಪಾಸಣೆಯ ಮೇಲೆ ಕೇಂದ್ರೀಕರಿಸಿದ ಈ ಅಭಿಯಾನವು, 1.59 ಕೋಟಿಗೂಅಧಿಕ ಭಾರತೀಯ ಮಹಿಳೆಯರಲ್ಲಿ ಜಾಗೃತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜೊತೆಗೆ, ಕಳೆದ 5 ವರ್ಷಗಳ ಅವಧಿಯಲ್ಲಿ ವೆಚ್ಚ ಇಳಿಸುತ್ತಾ ಪರಿಣಾಮ ಹೆಚ್ಚಿಸುವ ಅಪರೂಪದ ಸಾಧನೆಯನ್ನು ಈ ಉಪಕ್ರಮ ತೋರಿಸಿದೆ ಎಂದು ಸಂಜಯ್ ಭಟ್ ತಿಳಿಸಿದ್ದಾರೆ.
ನಮ್ಮ ಹಳೆ ವಿದ್ಯಾರ್ಥಿ ಸಂಜಯ್ ಭಟ್‌ ಅವರು ಸಾಮಾಜಿಕ ಹಿತಾಸಕ್ತಿ ಮತ್ತು ಉದ್ಯಮವಲಯಕ್ಕೆ ನೀಡುತ್ತಿರುವ ಕೊಡುಗೆ ಹಾಗೂ ರಾಷ್ಟ್ರ ಮಟ್ಟದಲ್ಲಿ ಗೆದ್ದ ಈ ಸಾಧನೆ ನಮಗೆಲ್ಲ ಬಹಳ ಹೆಮ್ಮೆಯ ವಿಷಯ ಎಂದು, ಶ್ರೀ ಮಹಾವೀರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರಜೈನ್, ಮಣಿಪಾಲ ಮಾಹೆಯ ಪ್ರೊ.ಚಾನ್ಸಲರ್ ಮತ್ತು ಅಕಾಡೆಮಿ ಆಫ್‌ ಜನರಲ್‌ ಎಜುಕೇಶನ್‌ ಇದರ ಅಧ್ಯಕ್ಷರಾದ ಡಾ. ಹೆಚ್. ಎಸ್ ಬಲ್ಲಾಳ್, ಶ್ರೀ ಮಹಾವೀರ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರು, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here