Saturday, June 14, 2025
Homeಬೆಂಗಳೂರುಎಪಿಎಸ್ ಎಜುಕೇಷನಲ್ ಟ್ರಸ್ಟ್ ನಿಂದ ಮೇ 3 ರಂದು ರಾಷ್ಟ್ರ ಮಟ್ಟದ ಶಿಕ್ಷಣ ಪ್ರದರ್ಶನ ಮತ್ತು...

ಎಪಿಎಸ್ ಎಜುಕೇಷನಲ್ ಟ್ರಸ್ಟ್ ನಿಂದ ಮೇ 3 ರಂದು ರಾಷ್ಟ್ರ ಮಟ್ಟದ ಶಿಕ್ಷಣ ಪ್ರದರ್ಶನ ಮತ್ತು ಉದ್ಯೋಗ ಮೇಳ

ಬೆಂಗಳೂರು, ಮೇ, 1; ಎಪಿಎಸ್ ಎಜುಕೇಷನಲ್ ಟ್ರಸ್ಟ್ ತನ್ನ ಮೊದಲ ರಾಷ್ಟ್ರ ಮಟ್ಟದ ಶಿಕ್ಷಣ ಪ್ರದರ್ಶನ ಮತ್ತು ಉದ್ಯೋಗ ಮೇಳವನ್ನು ಮೇ 3 ರಂದು ಆಯೋಜಿಸಿದೆ.
ನಗರದ ಎಪಿಎಸ್ ಮೈದಾನದಲ್ಲಿ ಈ ಮೇಳ ನಡೆಯಲಿದ್ದು, 100ಕ್ಕೂ ಅಧಿಕ ಹೆಸರಾಂತ ಕಂಪನಿಗಳು ಉದ್ಯೋಗ ಮತ್ತು ಇಂಟರ್ನ್ಶಿಪ್ ಅವಕಾಶಗಳನ್ನು ನೀಡಲಿವೆ.
ತಜ್ಞರ ಮಾತುಕತೆಗಳು, ಸಂವಾದಗಳು ಮತ್ತು ವೃತ್ತಿ ಸಮಾಲೋಚನೆ ದೇಶಾದ್ಯಂತ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗಾಕಾಂಕ್ಷಿಗಳನ್ನು ಒಂದೇ ವೇದಿಕೆಗೆ ಕರೆ ತರುವ ಗುರಿ ಹೊಂದಲಾಗಿದೆ ಎಂದು ಎಪಿಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ವಿಷ್ಣು ಭರತ್ ಅಲಂಪಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮತ್ತು ವೃತ್ತಿ ಮಾರ್ಗಗಳ ಬಗ್ಗೆ ತಿಳಿದುಕೊಳ್ಳಲು, ಪದವೀಧರರು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗದಾತರನ್ನು ಭೇಟಿ ಮಾಡಿ ಉದ್ಯೋಗ ಪಡೆಯಲು ಇದು ಸದಾವಕಾಶವಾಗಿದೆ. ಉಚಿತವಾಗಿ ನೋಂದಣಿ ಮಾಡಿಕೊಂಡು ಮೇಳದಲ್ಲಿ ಭಾಗವಹಿಸಬಗಹುದು. ನೋಂದಾಯಿತ ಪ್ರೊಫೈಲ್‌ಗಳನ್ನು ಮುಂಚಿತವಾಗಿ ಪರಿಶೀಲಿಸಲು ಸಾಧ್ಯವಾಗಲಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದು ಭವ್ಯ – 88613 40966 | 86605 99140 ಮೇಳದಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

RELATED ARTICLES
- Advertisment -
Google search engine

Most Popular