ಮಂಗಳೂರು:ತುಳುನಾಡಿನ ಅಸ್ಮಿತೆಯನ್ನು ಉಳಿಸಿ ಬೆಳೆಸಿದ ತುಳುವ ಮಹಾಸಭೆ, ತನ್ನ ಶತಮಾನೋತ್ಸವದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಚಟುವಟಿಕೆಗೆ ಹೊಸ ಉತ್ಸಾಹ ತುಂಬಿಕೊಳ್ಳುತ್ತಿದೆ. 1928ರಲ್ಲಿ ಸ್ಥಾಪನೆಯಾದ ಈ ಚಳವಳಿ ಪುನಶ್ಚೇತನಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ಮಹಾಸಭೆಯ ಮಂಗಳೂರು ತಾಲೂಕು ಸಂಚಾಲಕರಾಗಿ ಪ್ರಸಿದ್ಧ ಆಧ್ಯಾತ್ಮಿಕ ಗುರು ಮತ್ತು ಮಾರ್ಗದರ್ಶಕರಾದ ಅರವಿಂದ ಬೆಳ್ಚಡ ಅವರನ್ನು ನೇಮಕ ಮಾಡಲಾಗಿದೆ.
ಈ ನೇಮಕಾತಿಯ ಮೂಲಕ ಮಹಾಸಭೆ ಮಂಗಳೂರುದಲ್ಲಿ ತನ್ನ ಚಟುವಟಿಕೆಗಳಿಗೆ ಗಂಭೀರತೆ ಮತ್ತು ಆತ್ಮೀಯತೆ ನೀಡಲಿದೆ. ಅರವಿಂದ ಬೆಳ್ಚಡ ಅವರು ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು, ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಮುಖ್ಯ ಉದ್ದೇಶಗಳು: ತುಳುನಾಡು ಕಳರಿ ಮತ್ತು ಮರ್ಮ ಚಿಕಿತ್ಸೆಯ ಪುನಶ್ಚೇತನ, ಬಸ್ರೂರು ತುಳುವೇಶ್ವರ ದೇವಸ್ಥಾನದ ಪುನರ್ ಉದ್ಧಾರಣ,ಜಾತಿ, ಮತ, ಭಾಷಾ ಸೌಹಾರ್ದತೆ ಕಾಪಾಡುವುದು, ನಶಿಸಿದ ಆರಾಧನೆಗಳ ಅಧ್ಯಯನ ಮತ್ತು ಪುನರುಜ್ಜೀವನ , ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಮಾದರಿ ಯೋಜನೆಗಳ ರೂಪಣೆ, ತುಳು ಸಾಹಿತ್ಯ, ಕಲೆ ಹಾಗೂ ಜನಪದ ಪರಂಪರೆಗೆ ಉತ್ತೇಜನೆ, ಪ್ರಾದೇಶಿಕ ಭಾಷೆಗಳ ಸಂಸ್ಕೃತಿಗೆ ಗೌರವ ಮತ್ತು ಅಧ್ಯಯನ ಯುವಕರ ಉದ್ಯೋಗೋಪಯೋಗಿ ತರಬೇತಿ, ಕೃಷಿ ಮತ್ತು ಕುಲ ಕಸುಬುಗಳ ಪ್ರೋತ್ಸಾಹ, ಶಾಲಾ-ಕಾಲೇಜುಗಳಲ್ಲಿ ತುಳುನಾಡಿನ ಸಂಸ್ಕೃತಿಯ ಅರಿವು ಮೂಡಿಸುವ ಕಾರ್ಯಕ್ರಮಗಳು, ತುಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಪಡೆಯುವ ಹೋರಾಟ ಈ ಎಲ್ಲಾ ಕಾರ್ಯಗಳ ಮೂಲಕ ತುಳುವ ಮಹಾಸಭೆ ಮತ್ತೊಮ್ಮೆ ನಾಡಿನ ಹೃದಯದಲ್ಲಿ ಸ್ಪಂದಿಸುವ ನವಚೇತನವಾಗಲಿದ್ದು, ಅರವಿಂದ ಬೆಳ್ಚಡ ಅವರ ನೇತೃತ್ವ ಈ ಚಟುವಟಿಕೆಗೆ ನವೋತ್ಸಾಹ ನೀಡಲಿದೆ.