ರೋಟರಿ ಕ್ರೀಡಾಕೂಟಕ್ಕೆ ಹಿರಿಯ ವಿದ್ಯಾರ್ಥಿಗಳ ಆಗಮನ – ಕಿರಿಯ ವಿದ್ಯಾರ್ಥಿಗಳಿಗೆ ಪ್ರೇರಣೆ ” ರೊ ನಾಗರಾಜ್ ಬಿ

0
6

ಮೂಡಬಿದಿರೆ : ರೋಟರಿ ವಿದ್ಯಾ ಸಂಸ್ಥೆಗಳ ವಾರ್ಷಿಕ ಕ್ರೀಡೋತ್ಸವದ ಸಮಾರೋಪ ಸಮಾರಂಭವು ಇಲ್ಲಿನ ಸ್ವರಾಜ್ ಮೈದಾನಿನಲ್ಲಿ ಸಂಭ್ರಮದಲ್ಲಿ ನಡೆಯಿತು.

ಸಮಾರಂಭದಲ್ಲಿ ರೊ. ಬಿ. ನಾಗರಾಜ್, ರೊ. ಪ್ರವೀಣ್ ಚಂದ್ರ ಜೈನ್, ರೊ. ಜೆ. ಡಬ್ಲ್ಯೂ. ಪಿಂಟೋ, ಇನ್ನರ್ ವೀಲ್ ಕ್ಲಬ್ ಸದಸ್ಯೆ ಸಹನಾ ನಾಗರಾಜ್ ಮೂಡಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಡಾ. ಆಶೀರ್ವಾದ ಎಂ.ಪಿ. , ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಯ ಶ್ರೀ ಅಕ್ಷಯ್ ಜೈನ್ ಮತ್ತು ಪದಾಧಿಕಾರಿಗಳು , ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ತಿಲಕಾ ಅನಂತವೀರ ಜೈನ್, ರೋಟರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರವಿಕುಮಾರ್ ಹಾಗೂ ರೋಟರಿ ಕೇಂದ್ರೀಯ ಶಾಲಾ ಪ್ರಾಂಶುಪಾಲೆ ಲಕ್ಷ್ಮೀ ಮರಾಠೆ ಇವರ ಉಪಸ್ಥಿತಿಯಲ್ಲಿ ಸಂಭ್ರಮದಿಂದ ನಡೆಯಿತು.

ರೋಟರಿ ಶಿಕ್ಷಣ ಸಂಸ್ಥೆಗಳ ಖಜಾಂಚಿ ರೊ. ನಾಗರಾಜ್ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯ ಕೋರಿ ಕ್ರೀಡೋತ್ಸವದ ದಿನವು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿಯೂ ಸ್ಮರಣೀಯವಾಗಿ ಉಳಿಯಲಿದೆ , ರೋಟರಿ ಕ್ರೀಡಾಕೂಟಕ್ಕೆ ಹಿರಿಯ ವಿದ್ಯಾರ್ಥಿಗಳ ಆಗಮನ ಮತ್ತು ಭಾಗವಹಿಸುವಿಕೆ ಕಿರಿಯ ವಿದ್ಯಾರ್ಥಿಗಳಿಗೆ ಪ್ರೇರಣೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ರೊ. ಪ್ರವೀಣ್ ಚಂದ್ರ ಜೈನ್ ಅವರು, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಹಾಗೂ ಬಹುಮಾನ ಗಳಿಸಿದ ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಯತ್ನವನ್ನೂ ಪ್ರಶಂಸಿಸಿದರು. ವಿದ್ಯಾರ್ಥಿಗಳು ಶಿಸ್ತಿನ ಜೊತೆಗೆ ಉತ್ತಮ ಸಂಸ್ಕಾರವನ್ನೂ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿ ಕ್ರೀಡೋತ್ಸವದ ಯಶಸ್ಸಿಗೆ ಶ್ರಮಿಸಿದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದರು.

ಅಪರಾಹ್ನ ಹಳೆ ವಿದ್ಯಾರ್ಥಿಗಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳ ಆಯೋಜನೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಆಗಮಿಸಿದ ಹಳೆ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡರು ಮತ್ತು ವಿಜೇತರಿಗೆ ಪದಕ ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ದಿನವಿಡೀ ನಡೆದ ವಿವಿಧ ಸ್ಪರ್ಧೆಗಳ ವಿಜೇತರನ್ನು , ಅತ್ಯುತ್ತಮ ಪಥಸಂಚಲನ ಪ್ರದರ್ಶಿಸಿದ ತಂಡಗಳನ್ನು ಹಾಗೂ ವೈಯಕ್ತಿಕ ಚಾಂಪಿಯನ್‌ಶಿಪ್ ಗಳಿಸಿದ ಕ್ರೀಡಾಳುಗಳನ್ನು ಗುರುತಿಸಿ ಗೌರವಿಸಲಾಯಿತು.

ವೈಯಕ್ತಿಕ ಚಾಂಪಿಯನ್‌ಶಿಪ್ ವಿಜೇತರು:

  • ರೋಟರಿ ಆಂಗ್ಲ ಮಾಧ್ಯಮ ಶಾಲೆ (ಪ್ರೌಢ ವಿಭಾಗ): ಮೊಹಮ್ಮದ್ ಅನಸ್ (ಬಾಲಕರ ವಿಭಾಗ)
    ಸಾನಿಕಾ ಶೇಖರ್ ಪೂಜಾರಿ (ಬಾಲಕಿಯರ ವಿಭಾಗ).

(ಹಿರಿಯ ಪ್ರಾಥಮಿಕ ವಿಭಾಗ): ಋತ್ವಿಕ್ ಆರ್. (ಬಾಲಕರ ವಿಭಾಗ), ಪ್ರತ್ಯೂಷಾ (ಬಾಲಕಿಯರ ವಿಭಾಗ).

  • ರೋಟರಿ ಕೇಂದ್ರೀಯ ಶಾಲೆ (ಪ್ರೌಢಶಾಲಾ ವಿಭಾಗ)
    ಅಬ್ದುಲ್ ಫಜಲ್ ರೆಹಮಾನ್ ಮತ್ತು
    ಲಿಬಾ ಸುಲ್ತಾನಾ

(ಪ್ರಾಥಮಿಕೋತ್ತರ ವಿಭಾಗ): ಸುಹಾನ್ ಎಸ್ , ವರ್ಷಾ ಎಸ್.ಎಚ್., ಅಮ್ನಾ ಫಾತಿಮಾ ಮತ್ತು ಗಾನವಿ ಎನ್. ಅಡ್ಕಾ.

  • ರೋಟರಿ ಪದವಿಪೂರ್ವ ವಿಭಾಗ: ಆದಿತ್ಯ ನಾಯಕ್ (ಪ್ರಥಮ ಪಿಯುಸಿ ವಿಜ್ಞಾನ)
    ತೃಪ್ತಿ ಪೂಜಾರಿ (ದ್ವಿತೀಯ ಪಿಯುಸಿ ವಾಣಿಜ್ಯ). ವಿದ್ಯಾರ್ಥಿಗಳಲ್ಲಿ ಕ್ರೀಡಾಸ್ಫೂರ್ತಿ, ಶಿಸ್ತು, ಸಹಕಾರ ಮನೋಭಾವ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ವೇದಿಕೆಯಾಗಿ ಮೂಡಿ ಬಂದ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಕೇಂದ್ರೀಯ ಶಾಲೆಯ ಶಿಕ್ಷಕಿ ಶ್ರೀಮತಿ ಪ್ರೀತಿ ಮತ್ತು ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶ್ರೀ ಅನ್ಸಿಲ್ ಪ್ರಿನ್ಸಿಸ್ಟನ್ ಸೆರಾವೋ ಕಾರ್ಯಕ್ರಮ ನಿರೂಪಿಸಿದರು