ಕಲಾವಿದ ಜಯ ಸಾಲಿಯನ್ ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ ಘೋಷಣೆ

0
59

ಮುಂಬೈ: ಖ್ಯಾತ ಕಲಾವಿದ ಜಯ ಸಾಲಿಯನ್ ಅವರಿಗೆ ಚಿತ್ರಕಲಾ ಕ್ಷೇತ್ರದಲ್ಲಿನ ಅವರ ಅವಿರತ ಸೇವೆ ಮತ್ತು ಸಮರ್ಪಣಾ ಮನೋಭಾವವನ್ನು ಗುರುತಿಸಿ, 2025ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ದಾದಾಸಾಹೇಬ್ ಫಾಲ್ಕೆ ಚಿತ್ರಪಟ ಯೂನಿಯನ್ ವತಿಯಿಂದ ನೀಡಲಾಗುವ ಈ ಗೌರವವು, ಸಾಲಿಯನ್ ಅವರು ಸಮಾಜಕ್ಕೆ ನೀಡಿದ ಕಲಾತ್ಮಕ ಕೊಡುಗೆಗೆ ಸಂದ ಗೌರವವಾಗಿದೆ.

ಈ ಅದ್ದೂರಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 25 ಜನವರಿ 2026 ರಂದು ಮುಂಬಯಿಯ ಪ್ರಭಾದೇವಿಯಲ್ಲಿರುವ ರವೀಂದ್ರ ನಾಟ್ಯ ಮಂದಿರದಲ್ಲಿ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಹಲವಾರು ಗಣ್ಯರು, ಸಾಮಾಜಿಕ ಕ್ಷೇತ್ರದ ಮುಖಂಡರು ಹಾಗೂ ವಿವಿಧ ಕ್ಷೇತ್ರಗಳ ದಿಗ್ಗಜರು ಉಪಸ್ಥಿತರಿರಲಿದ್ದಾರೆ.

LEAVE A REPLY

Please enter your comment!
Please enter your name here