ಅಶೋಕ ಆಚಾರ್ಯ ಕೊಡ್ಯಡ್ಕ ಅವರಿಗೆ ‘ಪದ್ಮಕಲಾ ತಪಸ್ವಿ’ ಬಿರುದು

0
151

ಮೂಡುಬಿದಿರೆ : ಮುಂಬಯಿಯ ಪ್ರತಿಷ್ಠಿತ ಪದ್ಮಶಾಲಿ ಸಮಾಜ ಸೇವಾ ಸಂಘ ಹಾಗೂ ದ. ಪದ್ಮಶಾಲಿ ಎಜ್ಯುಕೇಶನ್ ಸೊಸೈಟಿಯು ನಟ, ರಂಗನಿರ್ದೇಶಕ, ಕರಕುಶಲ ವಿನ್ಯಾಸಗಾರ ಅಶೋಕ ಆಚಾರ್ಯ ಕೊಡ್ಯಡ್ಕ ಅವರಿಗೆ ‘ಪದ್ಮಕಲಾ ತಪಸ್ವಿ’ ಬಿರುದು ನೀಡಿ ಗೌರವಿಸಿದೆ.

ಕೊಡ್ಯಡ್ಕ ಅಚ್ಯುತ ಆಚಾರ್ಯ – ಶಾರದಾ ದಂಪತಿಯ ಪುತ್ರರಾದ ಇವರು ಧರ್ಮಸ್ಥಳ ಗುರುಕುಲದಲ್ಲಿ ಪದವಿ ಶಿಕ್ಷಣ ಮುಗಿಸಿ ಮುಂಬೈಗೆ ತೆರಳಿದ್ದರು. ಮುಂಬಯಿಯಲ್ಲಿ ರಂಗನಿರ್ದೇಶಕರಾಗಿ, ನಟರಾಗಿ ಮಿಂಚಿದ್ದ ಅವರು ಕರಾವಳಿಯ ಸೊಗಡಿನ ಹಿನ್ನೆಲೆಯ ವೇದಿಕೆ ನಿರ್ಮಾಣ, ಅಲಂಕಾರದ ಮೂಲಕ ಮುಂಬಯಿಯ ಬೇಡಿಕೆಯ ಕಲಾವಿದರಾಗಿ ಗಮನಸೆಳೆದಿದ್ದಾರೆ.

LEAVE A REPLY

Please enter your comment!
Please enter your name here