ಅಂತರಾಷ್ಟ್ರೀಯ ಅಲಯನ್ಸ್ ಕ್ಲಬ್ D/275 S ಉಡುಪಿ ಚಿಟ್ಪಾಡಿ, ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ (ರಿ ), ಶಿರಿಬೀಡು ನಗರ ಸಮಿತಿ ಹಾಗೂ ಕ್ಷೇತ್ರ ಸಮಿತಿ ಉಡುಪಿ ಇವರ ಜಂಟಿ ಆಯೋಜನೆಯಲ್ಲಿ ಆಟಿಡೊಂಜಿ ದಿನವನ್ನು ದಿನಾಂಕ 9/8/2026 ನೇ ಭಾನುವಾರ ಬೆಳಿಗ್ಗೆ 10.30 ಗಂಟೆಗೆ ಯು ಕಮಲ ಬಾಯಿ ಹೈಸ್ಕೂಲ್ ಕಡಿಯಾಳಿ ಸಭಾಂಗಣದಲ್ಲಿ ಕೆ ರವಿ ಆಚಾರ್ ( KSTA) ಅಧ್ಯಕ್ಷತೆಯಲ್ಲಿ ತೆಂಗಿನ ಕೊಂಬನ್ನು ಅರಳಿಸುವುದರ ಮೂಲಕ ಉದ್ಘಾಟಿಸಲಾಯಿತು ಮುಖ್ಯ ಅತಿಥಿಗಳಾಗಿ ರತ್ನಾವತಿ ಜೆ ಬೈಕಾಡಿ (ಪ್ರಧಾನ ಸಂಪಾದಕರು roovari.com) ಡಾ ವಿಜಯೇಂದ್ರ ವಸಂತ್ ರಾವ್, ವಿಟ್ಟಲ್ ಶೆಟ್ಟಿ (KSTA), ಶಾರದ ರವೀಂದ್ರ , ಅಲೈ LMF ಸುರೇಖಾ ಆರ್ ಶೆಟ್ಟಿ , AACI D/275 S ಕೋಶಾಧಿಕಾರಿ ನಿತಿನ್ ಹಾಗೂ ರಾಜ್ಯ ಸಮಿತಿ, ಜಿಲ್ಲಾ ಸಮಿತಿ, ಕ್ಷೇತ್ರ ಸಮಿತಿ KSTA ಇದರ ಪದಾಧಿಕಾರಿಗಳು ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ KSTA ಜಿಲ್ಲಾ ಸಮಿತಿಯ ಹಿರಿಯರಾದ .ಕೆ. ರವಿ ಆಚಾರರವರನ್ನು AACI D/ 275 S ಉಡುಪಿ ಚಿಟ್ಪಾಡಿಯ ವತಿಯಿಂದ ಸನ್ಮಾನಿಸಲಾಯಿತು.
ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಲು ಬಂದಿದ್ದ ವಿದ್ಯಾರ್ಥಿಗಳಿಗೆ ಗೌರವಧನವನ್ನು ಸ್ಮರಣಿಕೆಯನ್ನು ನೀಡಲಾಯಿತು.
AACI ಅಧ್ಯಕ್ಷರಾದ ಅಲೈ LMF ಸುರೇಖಾ ಆರ್ ಶೆಟ್ಟಿಯವರು ಸ್ವಾಗತಿಸಿದರು.
AACI ಕಾರ್ಯದರ್ಶಿಯಾದ ಅಲೈ LMF ಜ್ಯೋತಿ ಆರ್ ಶೆಟ್ಟಿಯವರು ವಂದನಾರ್ಪಣೆಗೈದರು.
KSTA ಶಿರಿಬೀಡು ನಗರ ಸಮಿತಿ ಕಾರ್ಯದರ್ಶಿ ಶಾರದರವರು ನಿರೂಪಣೆ ಗೈದರು.

