ಹೆಜಮಾಡಿ ಬಿಲ್ಲವ ಸಂಘದ ಮಹಿಳಾ ಮಂಡಳಿ ವತಿಯಿಂದ ಆಟಿಡೊಂಜಿ ದಿನ

0
157

ಸಾಂಪ್ರದಾಯಿಕ ಆಚರಣೆಯನ್ನು ಉಳಿಸುವಲ್ಲಿ ಯುವಜನತೆ ಶ್ರಮಿಸಬೇಕು – ಮೋಹನ್ ದಾಸ್ ಹೆಜಮಾಡಿ.

ಹೆಜಮಾಡಿ: ಹೆಜಮಾಡಿ ಬಿಲ್ಲವರ ಸಂಘ ದ ಮಹಿಳಾ ಮಂಡಳಿ ಯ ಆಶ್ರಯ ದಲ್ಲಿ ಆ. ೧೫ರಂದು ಆಟಿಡೊಂಜಿ ದಿನ ಕಾರ್ಯಕ್ರಮ ವು ಹೆಜಮಾಡಿ ಬಿಲ್ಲವರ ಸಂಘ ದ ಜಯ ಸಿ ಸುವರ್ಣ ಸಭಾಗ್ರಹ ದಲ್ಲಿ ಜರಗಿತು. ಮಹಿಳಾ ಮಂಡಳಿ ಯ ಅಧ್ಯಕ್ಷೆ ಲಾವಣ್ಯ ಪ್ರಭೋದ್ ಕಾರ್ಯಕ್ರಮ ದ ಅಧ್ಯಕ್ಷತೆ ಯನ್ನು ವಹಿಸಿದ್ದರು. ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿಯವರು ಉದ್ಘಾಟಿಸಿ, ನಮ್ಮ ಯುವ ಜನತೆ ಪ್ರಾಚೀನ ಆಚರಣೆಗಳನ್ನು ಉಳಿಸಿ ಬೆಳೆಸಿ ನಾವು ಸಂಪ್ರದಾಯ ವಾಗಿ ಬೆಳೆಯ ಬೇಕು ಎಂದರು.
ಮುಖ್ಯ ಅತಿಥಿ ಯಾಗಿ ಭಾಗವಹಿಸಿದ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ಆಡಳಿತ ಮೊಕ್ತೇಶ್ವರ ದಯಾನಂದ ಹೆಜಮಾಡಿ ಉಪಸ್ಥಿತರಿದ್ದರು. ಮುಖ್ಯ ಭಾಷಣ ಮಾಡಿದ ಮೂಲ್ಕಿ ಬಿಲ್ಲವರ ಸಂಘ ದ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು ತುಳುವರ ಆಟಿ ತಿಂಗಳ ಆಚಾರ ವಿಚಾರ, ತಿಂಡಿ ತಿನಿಸುಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ವೇದಿಕೆ ಯಲ್ಲಿ ಧಾರ್ಮಿಕ ಮುಖಂಡ ಮಾಧವ ಸನಿಲ್, ಹೆಜಮಾಡಿ ಬಿಲ್ಲವರ ಸಂಘ ದ ಮಾಜಿ ಅಧ್ಯಕ್ಷ ದೊಂಬ ಪೂಜಾರಿ, ಹೆಜಮಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೋಹನ್ ಸುವರ್ಣ, ನಡುಕರೆಯ ಅಧ್ಯಕ್ಷ ವಿಶ್ವನಾಥ ಕೊಪ್ಪಲ, ಮೂಡುಕರೆಯ ಅಧ್ಯಕ್ಷ ಶ್ರೀನಿವಾಸ್ ಕೋಟ್ಯಾನ್, ಯುವವಾಹಿನಿ ಹೆಜಮಾಡಿ ಘಟಕದ ಅಧ್ಯಕ್ಷ ನಿಶಾಂಕ್ ಎಸ್. ಕೋಟಿಯನ್, ಮಹಿಳಾ ಮಂಡಳಿ ಯ ಕಾರ್ಯದರ್ಶಿ ಆಶಾ ನವೀನ್ ಉಪಸಿತರಿದ್ದರು.

ಮಹಿಳಾ ಮಂಡಳಿ ಉಪಾಧ್ಯಕ್ಷೆ ಸಂಧ್ಯಾ ರಮೇಶ್, ಬಿಲ್ಲವ ಸಂಘ ದ ಕಾರ್ಯದರ್ಶಿ ಪ್ರಭೋದ್ ಚಂದ್ರ,, ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಭಾಸ್ ಜಿ. ಸಾಲಿಯಾನ್, ಬಿಲ್ಲವ ಸಂಫ ದ ಕೋಶಾಧಿಕಾರಿ ಲೀಲೇಶ್ ಸುವರ್ಣ, ಯುವ ವಾಹಿನಿ ಕೇಂದ್ರ ಸಮಿತಿ ಯ ಮಾಜಿ ಅಧ್ಯಕ್ಷ ತಾರಾನಾಥ್ ಎಚ್. ಬಿ , ವೀರಮಾರುತಿ ದೇವಸ್ಥಾನ ದ ಪ್ರಧಾನ ಅರ್ಚಕ ನವೀನ್ ಕುಮಾರ್, ಚೆನ್ನಪ್ಪ ಸುವರ್ಣ, ರಮೇಶ್ ಸುವರ್ಣ, ಶಿವರಾಮ್ ಜಿ. ಅಮೀನ್ ಮುಂತಾದ ವರು ಉಪಸಿತರಿದ್ದರು. ಮಹಿಳಾ ಮಂಡಳಿ ಅಧ್ಯಕ್ಷೆ ಲಾವಣ್ಯ ಪ್ರಭೋದ್ ಸ್ವಾಗತಿಸಿದರು. ಕಾರ್ಯದರ್ಶಿ ಆಶಾ ನವೀನ್ ವಂದಿಸಿದರು. ದೀರಾಜ್ ಕೋಡಿ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಚಿಕ್ಕ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಹಿಳಾ ಮಂಡಳಿಯ ಸದಸ್ಯರು ತಯಾರಿಸಿದ ಸುಮಾರು 33 ಬಗೆಯ ವಿವಿಧ ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ಸಭಿಕರಿಗೆ ಉಣ ಬಡಿಸಲಾಯಿತು.

LEAVE A REPLY

Please enter your comment!
Please enter your name here