ತುಳುವೆರೆ ಚಾವಡಿ ಪೆಣ್ ಇದರ ವತಿಯಿಂದ “ಆಟಿಡೊಂಜಿ ಕೂಟ “ ಕಾರ್ಯಕ್ರಮ
ಪೆಣ್: ತುಳುವೆರೆ ಚಾವಡಿ ಪೆಣ್ ಇದರ ವತಿಯಿಂದ “ಆಟಿಡೊಂಜಿ ಕೂಟ “ ಕಾರ್ಯಕ್ರಮವು ಅಗ್ರಿ ಸಮಾಜ್ ಹಾಲ್, ಪೆಣ್ ರಾಯಿಗಡ್ , ಮಹಾರಾಷ್ಟ್ರ ಇಲ್ಲಿ ಇತ್ತೀಚೆಗೆ ಅರ್ಥ ಪೂರ್ಣವಾಗಿ ಜರಗಿತು.
ಸಂಸ್ಥೆಯ ಮಹಿಳಾ ಸದಸ್ಯೆ ಸುಕನ್ಯಾ ಶೆಟ್ಟಿ ಮತ್ತು ರಕ್ಷಿತಾ ಶೆಟ್ಟಿಯವರು ಪ್ರಾರ್ಥನೆಗೈದರು. ಮುಖ್ಯ ಅತಿಥಿಯಾಗಿ ತುಳುನಾಡ ತುಳುವೆರ್ ಕಲ್ಯಾಣ್ ಇದರ ಸಂಸ್ಥಾಪಕರಾದ ಅಶೋಕ್ ಎಲ್. ಪೂಜಾರಿ ಉಲ್ಯಗುತ್ತು ಪಂಜ ಕೊಯಿಕುಡೆ ಮತ್ತು ಸಂಸ್ಥೆಯ ಸದಸ್ಯರಾದ ಸತೀಶ್ ಶೆಟ್ಟಿ , ಹರೀಶ್ ಶೆಟ್ಟಿ, ನಾಗೇಶ್ ಜತ್ತನ್ ಮತ್ತು ಬಿಜೂರಾಜ್ ಸಾಲಿಯಾನ್ ನಂದಾದೀಪ ಬೆಳಗಿಸಿ ಕಾರ್ಯಕರ್ಮವನ್ನು ಉದ್ಘಾಟಿಸಿದರು.
ಆಟಿ ಕಳಂಜೆಯ ಪ್ರತೀಕವಾಗಿ ಸಭಾ ಆವರಣದಲ್ಲಿ ಮುಟ್ಟಲೆ, ಮಡಲಲ್ಲಿ ಮಾಡಿದ ಛತ್ರ , ಅಕ್ಕಿ ಮತ್ತು ತೆಂಗಿನ ಕಾಯಿಯನ್ನು ಸೂಪಿನಲ್ಲಿ ಇಟ್ಟು ಸಂಭ್ರಮಿಸಿದರು.
ಸತೀಶ್ ಶೆಟ್ಟಿ , ಬಿಜೂರಾಜ್ ಸಾಲಿಯಾನ್ ಮತ್ತು ಪ್ರಭಾಕರ್ ಪೂಜಾರಿ ಇವರು ಸಂಗೀತ ರಸಮಂಜರಿಯಿಂದ ಎಲ್ಲರನ್ನು ಸಂತೋಷ ಪಡಿಸಿದರು. ಸಂಸ್ಥೆಯ ಸದಸ್ಯರ ಮಕ್ಕಳಾದ , ಹಾರ್ವಿ ಶೆಟ್ಟಿ , ದಕ್ಷತಾ ನೆಲ್ಲಿಗುಡ್ಡೆ , ಪ್ರಣ್ವಿ ಪೂಜಾರಿ ಮತ್ತು ಪ್ರಿಹಾನ್ ಪೂಜಾರಿ ಇವರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಿತು. ಬಿಜುರಾಜ್ ಸಾಲಿಯಾನ್ ನವರು ಅತಿಥಿಗಳನ್ನು ಸ್ವಾಗತಿಸಿದರು.
ಸಭಾಕಾರ್ಯಕ್ರಮದ ಅಥಿತಿ ಗಳಾದ ಅಶೋಕ್ . ಎಲ್ . ಪೂಜಾರಿ , ಸತೀಶ್ ಶೆಟ್ಟಿ , ನಾರಾಯಣ ಪೂಂಜಾ , ಪ್ರವೀಣ್ ಶೆಟ್ಟಿ, ಜಗನಾಥ್ ಶೆಟ್ಟಿ , ಸೂರಜ್ ಸುವರ್ಣ, ಹೆಚ್ . ಎ . ಸಂತೋಷ್ , ಮಂಜುನಾಥ್. ಡಿ . ಗೌಡ , ಮತ್ತು ಗಣೇಶ್ ಆಳ್ವ ಇವರಿಗೆ ಶಾಲು ಹೊದೆಸಿ , ಫಲಪುಷ್ಪವನ್ನು ಇತ್ತು ಗೌರವಿಸಿದರು.
ಅಶೋಕ್ ಎಲ್ . ಪೂಜಾರಿಯವರು ಮಾತನಾಡುತ್ತ , ನಾವು ನಮ್ಮ ತುಳುನಾಡ ಸಂಸ್ಕೃತಿಯನ್ನು ಬಿತ್ತರಿಸುವ ” ಆಟಿಡೊಂಜಿ ಕೂಟ ” ಕಾರ್ಯಕ್ರಮವನ್ನು ನೋಡಿ ತುಂಬಾ ಸಂತೋಷವನ್ನು೦ಟು ಮಾಡಿತು ಎಂದರು. ಅವರು ತಾಯಿಯ ತ್ಯಾಗದ ಬಗ್ಗೆ ವಿವರವಾಗಿ ( ಅಪ್ಪೆನ ತ್ಯಾಗ ), ಅಮ್ಮ ಕಣ್ಣಿಗೆ ಕಾಣುವ ದೇವರು ಎಂದು ನೆರೆದ ಎಲ್ಲ ಬಾಂಧವರಿಗೆ ಮನದಟ್ಟುವಂತಹ ನಿಜ ಕಿವಿ ಮಾತನ್ನು ಹೇಳಿದರು ಮತ್ತು ಮಂಜುನಾಥ್ ಡಿ . ಗೌಡ, ಇಂತಹ ತುಳುನಾಡಿನ ಕಾರ್ಯಕ್ರಮ ಇಂದಿನ ಪೀಳಿಗೆಗೆ ತಿಳಿಸುವುದು ಮುಖ್ಯವಾಗಿದೆ ಎಂದರು.
ಬಿಜೂರಾಜ್ ಸಾಲಿಯಾನ್ ನವರು ಶ್ರೀ ಮದ್ಭಗವದ್ಗೀತೆಯ ೯ನೇ ಅಧ್ಯಾಯ ಸಂಪೂರ್ಣ ಶ್ಲೋಕ ಪಠಣ ( ಕಂಠಸ್ತೀಕರಣ ) ಮಾಡಿದರು. ನಂತರ ಮನೆ ಮನೆಯಲ್ಲೂ ಗೀತೆ ಕರ ಕರದಲ್ಲೂ ಗೀತೆ ಎಂದು ನುಡಿದರು.
ಸಂಸ್ಥೆಯ ಮಹಿಳಾ ವಿಭಾಗದ ಸುಕನ್ಯಾ ಶೆಟ್ಟಿ , ರಕ್ಷಿತಾ ಶೆಟ್ಟಿ ಮತ್ತು ಅಶಿಹ ಜತ್ತನ್ ಮಕ್ಕಳಿಗೆ ಹಾಗೂ ಸದಸ್ಯರಿಗೆ ಆಟೋಟ ಸ್ಪರ್ದೆಗಳನ್ನ ಆಯೋಜಿಸಿ, ಸ್ಪೆರ್ಧೆಯಲ್ಲಿ ಗೆದ್ದಂತಹ ಎಲ್ಲರಿಗೂ ಬಹುಮಾನ ಕೊಟ್ಟು ಗೌರವಿಸಿದರು. ಕೊನೆಗೆ ಸದಸ್ಯರು ತಯಾರು ಮಾಡಿದಂತಹ 32 ತಿಂಡಿ ತಿನಸುಗಳನ್ನೂ ಪ್ರದರ್ಶಿಸಿ ಎಲ್ಲರಿಗೂ ಉಣಬಡಿಸಿದರು.
ಸಂಸ್ಥೆಯ ಸದಸ್ಯರುಗಳಾದ ಸತೀಶ್ ಶೆಟ್ಟಿ , ಹರೀಶ್ ಶೆಟ್ಟಿ , ಬಿಜೂರಾಜ್ ಸಾಲಿಯಾನ್ , ಪ್ರಭಾಕರ್ ಪೂಜಾರಿ , ರಾಜೇಶ್ ಪೂಜಾರಿ , ಜಗನ್ನಾಥ್ ಜಿನ್ನಪ್ಪ ಶೆಟ್ಟಿ , ಶಶಿಕುಮಾರ್ ಶೆಟ್ಟಿ , ರಘುನಾಥ್ ಪೂಜಾರಿ , ದಿನ್ ರಾಜ್ ಪೂಜಾರಿ , ನಾಗೇಶ್ ಜತ್ತನ್ , ವೀರಪ್ಪ ನೆಲ್ಲಿಗುಡ್ಡೆ ,ಚಂದ್ರಹಾಸ್ ಅರಸ, ಸಂಜೀವ ಶೆಟ್ಟಿ , ಶೇಖರ್ ಶೆಟ್ಟಿ ಪೊಯ್ಸರ್, ಭಾಸ್ಕರ್ ಶೆಟ್ಟಿ , ನವೀನ ಶಟ್ಟಿ , ಕವಿರಾಜ್ ಶೆಟ್ಟಿ , ನಿಖಿಲ್ ಶೆಟ್ಟಿ , ಶ್ರವಿನ್ ಶೆಟ್ಟಿ , ಶಿವ್ ರಾಜ್ ಪೂಜಾರಿ, ಆನಂದ್ ಅಮೀನ್, ಶೈಲೇಶ್ ಅಮೀನ್, ಮತ್ತು ರಾಜೇಂದ್ರ ಶರ್ಮವವರು ಕಾರ್ಯಕ್ರಮದ ಯಶಸ್ವಿಗಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದರು.
ಕೊನೆಗೆ ಬಿಜುರಾಜ್ ಸಾಲಿಯಾನ್ ನವರು ಧನ್ಯವಾದ ಗೈದರು.
ತುಳುವೆರೆ ಚಾವಡಿ ಪೆಣ್.