ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಪ್ರಸ್ತುತಪಡಿಸುವ ನಾಡೋಜ ಹಂಪನಾ ರಚಿಸಿದ ದೇಸೀ ಮಹಾ ಕಾವ್ಯದ ರಂಗರೂಪ
“ಚಾರುವಸಂತ” ಪ್ರದರ್ಶನ 18, 19,20,21 ಆಗಸ್ಟ್ 2025 ಒಟ್ಟು ನಾಲ್ಕು ದಿನಗಳ ಕಾಲ ಪ್ರತಿದಿನ ಸಂಜೆ ಗಂಟೆ 6:45 ರಿಂದ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನ ಮೂಡುಬಿದಿರೆ ಇಲ್ಲಿ ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಚಾರುವ ವಸಂತ ರಂಗ ರೂಪ: ಡಾ. ನಾ. ದಾಮೋದರ ಶೆಟ್ಟಿ ಇವರದಾಗಿದ್ದು, ರಂಗ ಭೂಮಿ ನಿರ್ದೇಶಕ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಮುಖ್ಯಸ್ಥ ಜೀವನ್ ರಾಮ್ ಸುಳ್ಯ ನಿರ್ದೇಶನ ಮಾಡಲಿದ್ದಾರೆ, ರಂಗರೂಪಕ್ಕೆ ಜೀವನ ರಾಮ್ ಸುಳ್ಯ ಹಾಗೂ ಮನುಜ ನೇಹಿಗ ಸುಳ್ಯ ಸಂಗೀತ ನೀಡಲಿದ್ದಾರೆ .
ಚಾರು ವಸಂತ ಮಹಾಕಾವ್ಯದ ರಂಗರೂಪದಲ್ಲಿ ನೀನಾಸಂ ಪದವೀಧರೆ ಮಮತಾ ಕಲ್ಮಕಾರು ಸುಳ್ಯ,ನೀನಾಸಂ ಪದವೀಧರ ನವೀನ್ ಕಾಂಚನ,ಪ್ರೀತಂ ಮೈಸೂರ್, ಅಭಿಷೇಕ್ ಮಂಡ್ಯ,ವಿಸ್ಮಯ ಮೂಡಬಿದಿರೆ, ಕೃಪಾ ನಾಯಕ್, ಡ್ರಾಮಾ ಜೂನಿಯರ್ ಖ್ಯಾತಿಯ ತೇಜಸ್ವಿನಿ ತರೀಕೆರೆ, ನಿಶ್ಮಿತಾ ಗೌಡ, ವೈಶಾಖ್ ದಾಸ್ ಕುಂದಾಪುರ, ಹಾಗೂ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಪಾತ್ರಧಾರಿಗಳಾಗಿ ಅತ್ಯುತ್ತಮ ಪ್ರದರ್ಶನ ನೀಡಲಿದ್ದು, ಸುಮನಾ ಪ್ರಸಾದ್ ಸಹಕಾರ ನೀಡಲಿದ್ದಾರೆ.
ಕಾರ್ಯಕ್ರಮಕ್ಕೆ ಸಂಪೂರ್ಣ ಉಚಿತ ಪ್ರವೇಶ ಒದಗಿಸಲಾಗಿದ್ದು, ಯಾವುದೇ ಸಭಾ ಕಾರ್ಯಕ್ರಮ ಹೊಂದಿರುವುದಿಲ್ಲ. ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಲಿದ್ದು, ಸೀಮಿತ 800 ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮ ಆರಂಭಕ್ಕೆ ಮುಂಚಿತವಾಗಿ ಪ್ರೇಕ್ಷಕರು ಉಪಸ್ಥಿತರಿರುವಂತೆ ಕೋರಲಾಗಿದೆ.
ವರದಿ :-ಮಂದಾರ ರಾಜೇಶ್ ಭಟ್

