ಬಂಟ್ವಾಳದಲ್ಲಿ ಆಟೋ ಚಾಲಕ ನಾಪತ್ತೆ

0
58

ಬಂಟ್ವಾಳ : ವಗ್ಗದ ನಿವಾಸಿ ಆಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಗ್ಗ ಸಮೀಪದ ಕಾಡಬೆಟ್ಟು ಗ್ರಾಮದ ಕೆಳಗಿನ ವಗ್ಗ ನಿವಾಸಿಯಾಗಿರುವ ಮಹಮ್ಮದ್ ರಾಯಿಬ್(21) ಕಾಣೆಯಾದ ಆಟೋ ಚಾಲಕ.

ರಾಯಿಬ್ ವಿವಾಹಿತನಾಗಿದ್ದು, ತಂದೆಯ ಮನೆಯ ಸಮೀಪವೇ ವಾಸವಾಗಿದ್ದ. ಆದರೆ, ರಾತ್ರಿ ಮಲಗಲು ನಿತ್ಯ ತಂದೆಯ ಮನೆಗೆ ಹೋಗುತ್ತಿದ್ದ. ಅದೇ ರೀತಿ ಎ.01 ರಂದು ತಂದೆಯ ಮನೆಯಲ್ಲಿ ಮಲಗಿದ್ದ. ಈತ ಬೆಳಿಗ್ಗೆ ಮನೆಯಲ್ಲಿರದೆ ಕಾಣೆಯಾಗಿರುವ ಬಗ್ಗೆ ಈತನ ತಂದೆ ಅಬ್ದುಲ್ ಲತೀಫ್ ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here