ಬಿ.ಆರ್.ಎಂ.ಪಿ.ಸಿ.ಪಬ್ಲಿಕ್ ಸ್ಕೂಲ್, ವಿದ್ಯಾಗಿರಿ, ಬಂಟ್ವಾಳ : ಶಾಲಾ ವಾರ್ಷಿಕೋತ್ಸವ

0
58

ಬಂಟ್ವಾಳ :ಬಾಳಿನಲ್ಲಿ ಬರುವ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಲು ಪೋಷಕರು ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಮಕ್ಕಳು ಅದನ್ನು ಸರಿಯಾಗಿ ಬಳಸಿಕೊಂಡಾಗ ಮಾತ್ರಜೀವನದಲ್ಲಿಉನ್ನತಸಾಧನೆಮಾಡಲು ಸಹಕಾರಿಯಾಗುತ್ತದೆಎಂದು ಮಂಗಳೂರಿನ ಎನ್.ಸಿ.ಸಿ.ಕಮಾಂಡಿAಗ್‌ಆಫೀಸರ್‌ಲೆ| ಕರ್ನಲ್‌ರೋಹಿತ್ ಪ್ರಕಾಶ್‌ರೈ ಹೇಳಿದರು.ಇವರು ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್‌ನಶಾಲಾ ವಾರ್ಷಿಕೋತ್ಸವದಮುಖ್ಯಅತಿಥಿಯಾಗಿ ಭಾಗವಹಿಸಿ ನುಡಿದರು.
ಎಸ್.ವಿ.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಶ್ರೀಮತಿ ಕೆ ರೇಖಾ ಶೆಣೈಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಶ್ರೀಮತಿ ಪೂರ್ಣೇಶ್ವರಿ ಭಟ್ ಕೆ ಅವರುಶಾಲಾ ವಾರ್ಷಿಕ ವರದಿ ವಾಚಿಸಿದರು.ವೇದಿಕೆಯಲ್ಲಿಶಾಲಾ ಸಂಯೋಜನಾಧಿಕಾರಿಯಾದ ಶ್ರೀಮತಿ ಜೂಲಿಯಾನ ಡಿ’ಸೋಜ ಉಪಸ್ಥಿತರಿದ್ದರು.ಶ್ರೀ ಮನೋಹರಎಸ್‌ದೊಡ್ಡಮನಿ ಸ್ವಾಗತಿಸಿ, ಶ್ರೀಮತಿ ಶುಭಲತಾವಂದಿಸಿದರು.ಅನನ್ಯಮತ್ತು ಸಂಗಡಿಗರುಪ್ರಾರ್ಥಿಸಿ, ವಿವಾನ್ ಮೆಲ್ರಿಕ್ ಮೆನೆಜಸ್ ಹಾಗೂ ಧೃತಿಎಚ್‌ನಿರೂಪಿಸಿದರು.ಶ್ರೀಮತಿ ಅನಿತಾ ಡಿ’ಸೋಜಮುಖ್ಯ ಅತಿಥಿಗಳನ್ನು ಪರಿಚಯಿಸಿದರು.ಶ್ರೀಮತಿ ದಿವ್ಯ ಮತ್ತು ಶ್ರೀಮತಿ ಮರಿಯಾರೊಲಿಟಾ ಡಿ’ಸೋಜ ಬಹುಮಾನ ವಿತರಣಾಕಾರ್ಯಕ್ರಮ ನಡೆಸಿಕೊಟ್ಟರು.ಸಭಾಕಾರ್ಯಕ್ರಮದನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

LEAVE A REPLY

Please enter your comment!
Please enter your name here