ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ., ಉಡುಪಿ ವಿಶ್ವ ಯೋಗ ದಿನಾಚರಣೆ – 2025

0
13

ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸಾÊಟಿ ಲಿಮಿಟೆಡ್ ಇದರ ವತಿಯಿಂದ ವಿಶ್ವಯೋಗ ದಿನಾಚರಣೆಯನ್ನು ಅಜ್ಜರಕಾಡು ಟೌನ್ (ಮಿನಿ) ಹಾಲ್ ನಲ್ಲಿ ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಜಯಕರ ಶೆಟ್ಟಿ ಇಂದ್ರಾಳಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆರ್ಟ್ ಆಫ್ ಲಿವಿಂಗ್ ಮಣಿಪಾಲದ ಸುನೀತಾ ನಾಯಕ್ ಯೋಗ ತರಬೇತಿಯನ್ನು ನೀಡಿದರು. ಸಂಘದ ಸಿಬ್ಬಂದಿ ಭಾರತಿ ಪಿ. ಹೆಗ್ಡೆ ಯೋಗ ಪ್ರಾತ್ಯಕ್ಷಿಕೆ ನೀಡಿದರು. ಸಂಸ್ಥೆಯ ನಿರ್ದೇಶಕ ಮಂಡಳಿ ಸದಸ್ಯರು, ಶಾಖಾ ಸಲಹಾ ಸಮಿತಿ ಸದಸ್ಯರು, ಶಾಖಾ ವ್ಯವಸ್ಥಾಪಕರು, ಸಿಬ್ಬಂದಿಗಳು ಮತ್ತು ದೈನಿಕ ಠೇವಣಿ ಸಂಗ್ರಾಹಕರು ಯೋಗಾಭ್ಯಾಸ ನಡೆಸಿದರು. ಸಂಘದ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್ ಸ್ವಾಗತಿಸಿ, ಮಲ್ಪೆ ಶಾಖಾ ವ್ಯವಸ್ಥಾಪಕರಾದ ನವೀನ್ ಕೆ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್ ವಂದಿಸಿದರು.

LEAVE A REPLY

Please enter your comment!
Please enter your name here