ಕಳೆದ ಹದಿನಾರು ವರ್ಷಗಳಿಂದ ಯಕ್ಷಗಾನ ತಾಳಮದ್ದಳೆ ಮತ್ತು ಮೇಳಗಳ ಯಕ್ಷಗಾನ ( ಹನುಮಗಿರಿ, ಎಡನೀರು, ಸಾಲಿಗ್ರಾಮ) ಮಾಡಿಸುತ್ತಾ ಬಂದಿರುವ ಯಕ್ಷಮೇನಕಾ ಹದಿನೇಳನೇ ವರ್ಷದ ಕಾರ್ಯಕ್ರಮವಾಗಿ ಇದೇ ಜೂ 29 ರಂದು ಮೂಡುಬಿದಿರೆ ಶ್ರೀ ವೆಂಕಟರಮಣ ದೇವಸ್ಥಾನ ಪೊನ್ನೆಚಾರಿ ಸಭಾ ಮಂಟಪದಲ್ಲಿ ಮಧ್ಯಾಹ್ನ 2.30 ರಿಂದ ಯಕ್ಷರಂಗದ ದಿಗ್ಗಜ ಕಲಾವಿದರಿಂದ ನೆರೆವೇರಲಿಕ್ಕಿದೆ , ಹಾಗೂ ಹಿರಿಯ ಭಾಗವತರಾದ ಪ್ರಫುಲ್ಲಚಂದ್ರ ನೆಲ್ಯಾಡಿ ಇವರಿಗೆ ಸನ್ಮಾನ ಮತ್ತು ಪ್ರಸಿದ್ಧ ಹಾಸ್ಯಗಾರರಾದ ಕಡಬ ದಿನೇಶ ರೈ ಇವರಿಗೆ ಈ ವರ್ಷದ ಯಕ್ಷ ಪ್ರೋತ್ಸಾಹ ನಿಧಿ ಸಮರ್ಪಣೆಯಾಗಲಿದೆ.