ವೇಣೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ BC ಟ್ರಸ್ಟ್ ಗುರುವಾಯನಕೆರೆ, ವೇಣೂರು ವಲಯ ಹಾಗೂ ವಿವಿಧ ಸಂಸ್ಥೆಗಳ ಮುಖಾಂತರ ದಿನಾಂಕ 17/8/2025 ಆದಿತ್ಯವಾರ ಬಜಿರೆ ಮಂಗಿನಿಬೆಟ್ಟು ಗದ್ದೆಯಲ್ಲಿ ನಡೆಯುವ ಪ್ರಥಮ ವರ್ಷದ ಆಟಿಡೊಂಜಿ ದಿನ ಕೆಸರದ ಗೊಬ್ಬು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಅರುಣ್ ಕ್ರಾಸ್ತಾ ಬಿಡುಗಡೆ ಮಾಡಿದರು.
ಈ ವೇಳೆ ಭರತ್ ರಾಜ್ ಪಾಪುದಡ್ಕ, ಸಮಿತಿ ಅಧ್ಯಕ್ಷ ಜಯಶಂಕರ ಹೆಗ್ಡೆ, ಉಪಾಧ್ಯಕ್ಷ ವಿಶ್ವನಾಥ್ ಆಚಾರ್ಯ, ಕಾರ್ಯದರ್ಶಿ ಗೋಪಾಲ್ ಆಚಾರ್ಯ, ರಕ್ಷಿತಾ, ವಲಯದ ಮೇಲ್ವಿಚಾರಕಿ ಶಾಲಿನಿ, ಸುದರ್ಶನ ಹೆಗ್ಡೆ, ಒಕ್ಕೂಟದ ಅಧ್ಯಕ್ಷರಾದ ಗಿರೀಶ್ ಕುಲಾಲ್, ಸೇವಾಪ್ರತಿನಿಧಿ ರೂಪ, ವಿವಿಧ ತಂಡದ ಸದಸ್ಯರು ಉಪಸಿತರಿದ್ದರು.