Saturday, June 14, 2025
HomeUncategorizedಬಲಾಯಿಪಾದೆ ಕನ್ನರ್ಪಾಡಿ ತೋಡು ಹೂಳು ತೆರವು ಕಾಮಗಾರಿ ಆರಂಭ

ಬಲಾಯಿಪಾದೆ ಕನ್ನರ್ಪಾಡಿ ತೋಡು ಹೂಳು ತೆರವು ಕಾಮಗಾರಿ ಆರಂಭ

ಮಳೆಗಾಲದ ಪೂರ್ವಭಾವಿಯಾಗಿ ಹಲವು ವರ್ಷಗಳಿಂದ ಹೂಳು ತೆರವುಗೊಳಿಸದೆ ಹೂಳು ತುಂಬಿ ಕೃತಕ ನೆರೆ ಸೃಷ್ಟಿಯಾಗುವ ಹಿನ್ನಲೆಯಲ್ಲಿ ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಲಾಯಿಪಾದೆಯಿಂದ ಕನ್ನರ್ಪಾಡಿ ವರೆಗಿನ ಸುಮಾರು 2 ಕಿಲೋ ಮೀಟರ್ ವ್ಯಾಪ್ತಿಯ ತೋಡಿನ ಹೂಳು ತಕ್ಷಣ ತೆರವು ಮಾಡಿ ಸರಾಗವಾಗಿ ಮಳೆ ನೀರು ಹರಿಯಲು ವ್ಯವಸ್ಥೆ ಮಾಡುವಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಸೂಚನೆ ನೀಡಿದರು.

ಅಧಿಕಾರಿಗಳೊಡನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯವರೊಂದಿಗೆ ಚರ್ಚಿಸಿ ಗ್ರಾಮಾಂತರ ಭಾಗದ ತೋಡುಗಳ ಹೂಳು ತೆರವು ಮಾಡಲು ಪ್ರಾಕೃತಿಕ ವಿಕೋಪ ನಿಧಿಯಿಂದ ಅನುದಾನ ಒದಗಿಸಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಕಾಮಗಾರಿ ನಡೆಸಲು ಸೂಚಿಸಲಾಗಿದೆ ಎಂದರು.

ಸಣ್ಣ ನೀರಾವರಿ ಇಲಾಖೆಯ ಮೂಲಕ ಕುತ್ಪಾಡಿ ಗರಡಿ ರಸ್ತೆಯ ತೋಡಿಗೆ ತಡೆಗೋಡೆ ನಿರ್ಮಾಣಕ್ಕೆ ಶೀಘ್ರ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಕಡೆಕಾರ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಜಯಕರ್ ಶೇರಿಗಾರ್, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಪ್ರಶಾಂತ್ ಸಾಲ್ಯಾನ್, ಶ್ರೀಮತಿ ವಿನೋದಿನಿ, ಶ್ರೀಮತಿ ಸುಲೋಚನಾ ಸೋಮಯ್ಯ, ಶ್ರೀಮತಿ ಸವಿತಾ ಹರೀಶ್ ಸ್ಥಳೀಯ ಪ್ರಮುಖರಾದ ಶ್ರೀಮತಿ ಮಾಲತಿ ಶೆಟ್ಟಿ, ಶ್ರೀ ಅಶೋಕ್ ಸುವರ್ಣ, ಶ್ರೀ ಕಿರಣ್ ಸುವರ್ಣ, ಶ್ರೀ ಗೌತಮ್, ಶ್ರೀ ವಿಜಯ್ ಭಟ್, ಶ್ರೀ ದೀಪಕ್ ಪುತ್ರನ್, ಶ್ರೀ ಅರುಣ್ ಕಡೆಕಾರ್, ಶ್ರೀ ಜಯಕರ ಸನಿಲ್, ಶ್ರೀ ಅಶೋಕ್ ಭಂಡಾರಿ, ಶ್ರೀ ಹರೀಶ್ ಶೆಟ್ಟಿಗಾರ್, ಶ್ರೀ ರಾಕೇಶ್ , ಶ್ರೀಪ್ರದೀಪ್ ಶ್ರೀ ಮಂಜುನಾಥ್, ಶ್ರೀ ಶಿವಾನಂದ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular