ಬೆಂಗಳೂರು ತುಳು ಕೂಟ ವತಿಯಿಂದ ನಾಳೆ ಔಷಧ ಗುಣದ ಪಾಲೆಮರದ ಕಷಾಯ ವಿತರಣೆ

0
118

ಬೆಂಗಳೂರು: ತುಳು ಕೂಟ ಬೆಂಗಳೂರು ವತಿಯಿಂದ ಔಷಧ ಗುಣ ಹೊಂದಿರುವ ಕಲ್ಲಿನಿಂದ ಕೆತ್ತಿತೆಗೆದ ಪಾಲೆಮರದ (ಮಲೆದ ಮರ) ತೊಗಟಿನ ಕಷಾಯವನ್ನು ಜು.24ರಂದು ವಿತರಣೆ ಮಾಡಲಾಗುತ್ತಿದೆ.
‘ನಗರದ ಮಾಲ್ ಹುಟ್ರೋ ಮಂತ್ರ ಸಮೀಪದ ಸ್ವಾತಿ ಹೋಟೆಲ್ ಪಕ್ಕದ ರಾಘವೇಂದ್ರಸ್ವಾಮಿ ಮಠದಲ್ಲಿ ಅಂದು ಬೆ.6ರಿಂದ 10 ಗಂಟೆಯವರೆಗೆ ವಿತರಿಸಲಾಗುವುದು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 2 ಸಾವಿರ ವರ್ಷಗಳಿಂದ ನಡೆದುಕೊಂಡು ಬಂದಂತಹ ಸಂಪ್ರದಾಯದ ಹಿನ್ನೆಲೆಯಲ್ಲಿ ಭೀಮನ ಅಮಾವಾಸ್ಯೆ ದಿನ ಕಲ್ಲಿನಿಂದ ಪಾಲೆಮರದ (ಮಲೆದ ಮರ) ತೊಗಟು ಕೆತ್ತಿ ಕಷಾಯವನ್ನು ತೆಗೆಯಲಾಗುತ್ತದೆ. ಆ ಮರದಲ್ಲಿ ಅಮಾವಾಸ್ಯೆ ದಿನ ವಿಶೇಷವಾದ ಔಷಧೀಯ ಗುಣ ಇರುತ್ತದೆ ಎಂಬುದು ಹಿರಿಯರ ನಂಬಿಕೆಯಾಗಿದೆ,” ಎಂದು ಕೂಟದ ಅಧ್ಯಕ್ಷ ಸುಂದರ್‌ರಾಜ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಮ್ಮ ನಾಡಿನ ಈ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸಿ, ಮುಂದಿನ ತಲೆಮಾರಿಗೂ ತಿಳಿಸುವ ಸಲುವಾಗಿ ಬೆಂಗಳೂರು ತುಳುಕೂಟದಿಂದ ಪ್ರತಿ ವರ್ಷ ಬೆಂಗಳೂರು ಮಹಾನಗರದಲ್ಲಿ ಕಷಾಯ ವಿತರಣಾ ಕಾರ್ಯಕ್ರಮ ಆಯೋಜಿಸುತ್ತಿದೆ. ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ 9845659531 ಸಂಪರ್ಕಿಸಬಹುದು.
.

LEAVE A REPLY

Please enter your comment!
Please enter your name here