ಆರ್‌ಬಿಐ ಗವರ್ನರ್ ಮತ್ತು ಬ್ಯಾಂಕ್ ಆಫ್ ಬರೋಡಾದ ಎಂಡಿ ಮತ್ತು ಸಿಇಒ ಉಪಸ್ಥಿತಿಯು ರಾಷ್ಟ್ರವ್ಯಾಪಿ ಅಭಿಯಾನದ ಮಹತ್ವವನ್ನು ಎತ್ತಿ ತೋರಿಸಿತು
ಅಹ್ಮದಾಬಾದ್: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ, ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಗೊಜಾರಿಯಾ ಗ್ರಾಮದಲ್ಲಿ 2025 ಆಗಸ್ಟ್ 11ರಂದು ಬೃಹತ್ ಶಿಬಿರ ಆಯೋಜಿಸಿತ್ತು. ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ(ಡಿಎಫ್ಎಸ್)ಪ್ರಾರಂಭಿಸಿದ ರಾಷ್ಟ್ರವ್ಯಾಪಿ ಪರಿಪೂರ್ಣತೆ ಅಭಿಯಾನದ ಭಾಗವಾಗಿ ಈ ಶಿಬಿರನಡೆಸಲಾಯಿತು. 2025ಜುಲೈ 1ರಿಂದ ಸೆಪ್ಟೆಂಬರ್ 30ರವರೆಗೆ ನಡೆಯುವ ಈ ಅಭಿಯಾನವು ಗ್ರಾಮ ಪಂಚಾಯಿತಿ(ಜಿಪಿ) ಮತ್ತು ನಗರ ಸ್ಥಳೀಯ ಸಂಸ್ಥೆಗಳು(ಯುಎಲ್‌ಬಿ) ಮಟ್ಟದಲ್ಲಿ ಹಣಕಾಸು ಸೇರ್ಪಡೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ 100% ವ್ಯಾಪ್ತಿ(ಸೇರ್ಪಡೆ)ಯನ್ನು ಖಚಿತಪಡಿಸುವ ಗುರಿ ಹೊಂದಿದೆ.
ಗುಜರಾತ್‌ನ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ(ಎಸ್‌ಎಲ್‌ಬಿಸಿ)ಯಸಂಚಾಲಕರಾಗಿ, ಬ್ಯಾಂಕ್ ಆಫ್ ಬರೋಡಾ ಈ ಕಾರ್ಯಕ್ರಮ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಈ ಕಾರ್ಯಕ್ರಮದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶ್ರೀ ಸಂಜಯ್ ಮಲ್ಹೋತ್ರಾ, ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀ ದೇಬದತ್ತ ಚಂದ್, ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಾದೇಶಿಕ ನಿರ್ದೇಶಕ ಶ್ರೀ ರಾಜೇಶ್ ಕುಮಾರ್, ಬ್ಯಾಂಕ್ ಆಫ್ ಬರೋಡಾದ ಜನರಲ್ ಮ್ಯಾನೇಜರ್ ಮತ್ತು ಗುಜರಾತ್‌ನ ಎಸ್‌ಎಲ್‌ಬಿಸಿಸಂಚಾಲಕರಾದ ಶ್ರೀ ಅಶ್ವಿನಿ ಕುಮಾರ್ ಉಪಸ್ಥಿತರಿದ್ದರು. ಗೋಜಾರಿಯಾ ಗ್ರಾಮ ಪಂಚಾಯಿತಿಯ ಸರಪಂಚ್ ಶ್ರೀಮತಿ ತೃಪ್ತಿಬೆನ್ ಅಮೃತಭಾಯಿ ಮಿಸ್ತ್ರಿ ಮತ್ತು ವಿವಿಧ ಬ್ಯಾಂಕ್‌ಗಳ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಭಾಗವಹಿಸಿದ್ದರು. 1,000ಕ್ಕೂ ಹೆಚ್ಚು ಗ್ರಾಮಸ್ಥರು, ಪ್ರಮುಖ ಸ್ಥಳೀಯ ಮುಖಂಡರು ಮತ್ತು ನಾಗರಿಕರು ಸಹ ಭಾಗವಹಿಸಿದ್ದರು.
ಆರ್‌ಬಿಐ ಗವರ್ನರ್ ಶ್ರೀ ಸಂಜಯ್ ಮಲ್ಹೋತ್ರಾ ಅವರು ಆರ್ಥಿಕ ಸೇರ್ಪಡೆಯ ಮಹತ್ವವನ್ನು ಒತ್ತಿ ಹೇಳಿದರು. ಪ್ರತಿಯೊಬ್ಬ ನಾಗರಿಕರಿಗೂ ಬ್ಯಾಂಕಿಂಗ್ ಸೇವೆಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಬ್ಯಾಂಕ್ ಖಾತೆ ತೆರೆಯುವುದು ಆರ್ಥಿಕ ಸಬಲೀಕರಣದ ಮೊದಲ ಹೆಜ್ಜೆಯಾಗಿದೆ. ಈ ನಿಟ್ಟಿನಲ್ಲಿ ಖಾತೆದಾರರು ತಮ್ಮ ಖಾತೆಗಳನ್ನು ನಿಯಮಿತವಾಗಿ ನಿರ್ವಹಿಸಬೇಕು, ಖಾತೆಗಳನ್ನು ನಿರ್ವಹಿಸಲು ಮತ್ತು ಸುರಕ್ಷಿತವಾಗಿಡಲು ಕೆವೈಸಿ ನವೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಗವರ್ನರ್ ಒತ್ತಿ ಹೇಳಿದರು. “ಹೆಚ್ಚಿನ ಆದಾಯ ನೀಡುವ/ಕೊಡುಗೆ ನೀಡುವ ಹಣಕಾಸು ಉತ್ಪನ್ನಗಳ ಬಗ್ಗೆ ಜನರು ಜಾಗೃತರಾಗಿರಬೇಕು. ಆಕರ್ಷಕವಾಗಿ ಕಾಣಬಹುದಾದ, ಆದರೆ ವಂಚನೆಗೆ ಹೆಚ್ಚಿನ ಅಪಾಯ ಹೊಂದಿರುವ ಕೆಲವು ಯೋಜನೆಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಗವರ್ನರ್ ಸೂಚನೆ ನೀಡಿದರು. ವೈಯಕ್ತಿಕವಾಗಿ ಅವರು ವ್ಯವಹಾರ ಪ್ರತಿನಿಧಿಗಳು(ಬಿಸಿಗಳು), ಸ್ವಸಹಾಯ ಗುಂಪು(ಎಸ್‌ಎಚ್‌ಜಿ) ಸದಸ್ಯರು ಮತ್ತು ಶಿಬಿರದಲ್ಲಿ ಭಾಗವಹಿಸಿದ ಇತರರೊಂದಿಗೆ ಸಂವಾದ ನಡೆಸಿದರು.
ಈ ಉಪಕ್ರಮದ ಕುರಿತು ಪ್ರತಿಕ್ರಿಯಿಸಿದ ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ರೀ ದೇಬದತ್ತ ಚಂದ್,”ಆರ್ಥಿಕ ಸೇರ್ಪಡೆಯು ಸಮಾನ ಬೆಳವಣಿಗೆ ಮತ್ತು ಸಾಮಾಜಿಕ ಸಬಲೀಕರಣದ ಮೂಲಾಧಾರವಾಗಿದೆ. ಈ ರೀತಿಯ ಪರಿಪೂರ್ಣತೆ ಅಭಿಯಾನಗಳ ಮೂಲಕ ಯೋಜನೆಗಳು ಪ್ರತಿಯೊಬ್ಬ ಅರ್ಹ ನಾಗರಿಕರನ್ನು ತಲುಪುವುದು, ಹಣಕಾಸು ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನಗಳು ಅನತಿ ದೂರದ ಫಲಾನುಭವಿಗೆ ತಲುಪುವಂತೆ ಖಚಿತಪಡಿಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆ. ಗೊಜಾರಿಯಾದಲ್ಲಿ ಕಂಡುಬಂದ ಜನರ ಭಾಗವಹಿಸುವಿಕೆ ಮತ್ತು ಉತ್ಸಾಹವು ನಾವು ರೂಪಿಸಬಹುದಾದ ಸಾಮೂಹಿಕ ಪರಿಣಾಮವನ್ನು ಪ್ರದರ್ಶಿಸುತ್ತದೆ.” ಬ್ಯಾಂಕಿನಲ್ಲಿ ನಿರ್ವಹಿಸಲಾಗುವ ತಮ್ಮ ಖಾತೆಗಳಲ್ಲಿ ಕೆವೈಸಿ ನವೀಕರಣವ ಪ್ರಕ್ರಿಯೆ ಮಾಡಿಸುವಂತೆ ಅವರು ಎಲ್ಲಾ ಗ್ರಾಹಕರನ್ನು ಒತ್ತಾಯಿಸಿದರು.”
ಕಾರ್ಯಕ್ರಮದ ಭಾಗವಾಗಿ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ) ಅಡಿ, ಕ್ಲೇಮ್ ಚೆಕ್‌ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಪಿಎಂಜೆಜೆಬಿವೈ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ(ಪಿಎಂಎಸ್‌ಬಿವೈ) ಅಡಿ, ವಿಮಾ ಪ್ರಮಾಣಪತ್ರಗಳನ್ನು, ಅಟಲ್ ಪಿಂಚಣಿ ಯೋಜನೆ(ಎಪಿವೈ) ಅಡಿ, ಹೊಸದಾಗಿ ದಾಖಲಾದ ಫಲಾನುಭವಿಗಳಿಗೆ ದಾಖಲಾತಿ ಸ್ವೀಕೃತಿ ರಶೀದಿಗಳನ್ನು ವಿತರಿಸಲಾಯಿತು.
ಗೊಜಾರಿಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕ್ ಶಾಖೆಗಳು ಬೃಹತ್ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವು.
ಭಾರತ ಸರ್ಕಾರದ ಸಾರ್ವತ್ರಿಕ ಆರ್ಥಿಕ ಸೇರ್ಪಡೆ(ಪ್ರವೇಶ) ಮತ್ತು ಸಮಗ್ರ ಸಾಮಾಜಿಕ ಭದ್ರತಾ ಯೋಜನೆಗಳ ವ್ಯಾಪ್ತಿಯ ದೃಷ್ಟಿಕೋನ ಮುಂದುವರಿಸಲು ಬ್ಯಾಂಕಿಂಗ್ ಸಮುದಾಯ ಹೊಂದಿರುವ ಅಚಲವಾದ ಬದ್ಧತೆಯನ್ನು ಈ ಬೃಹತ್ ಶಿಬಿರವು ಪ್ರದರ್ಶಿಸಿತು.