ಬಂಟ್ವಾಳ : ಹಿರಿಯ ಉದ್ಯಮಿ ಸುಂದರ ಸಾಲ್ಯಾನ್ ಗೆ ‘ನುಡಿ ನಮನ ‘

0
108

ಬಂಟ್ವಾಳ:ಇಲ್ಲಿನ ಅರಳ ಗ್ರಾಮದ ಹಿರಿಯ ಉದ್ಯಮಿ ಬೆಂಗಳೂರು ಮಂಗಳಾ ಆರ್ಟ್ ಪ್ರಿಂಟರ್ಸ್ ಸಂಸ್ಥೆ ಆಡಳಿತ ನಿರ್ದೇಶಕ ದಿವಂಗತ ಸುಂದರ ಸಾಲ್ಯಾನ್ ಎರ್ಮಾಳ್ ಇವರ ‘ನುಡಿನಮನ’ ಕಾರ್ಯಕ್ರಮ ಬೆಂಗಳೂರಿನಲ್ಲಿ ಶನಿವಾರ ನಡೆಯಿತು. ಮಾಜಿ ಸಚಿವ ಬಿ. ರಮಾನಾಥ ರೈ, ಬಂಟ್ವಾಳ ತಾ. ಪಂ. ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಮಾಧವ ಎಸ್. ಮಾವೆ, ಕೆಡಿಪಿ ಮಾಜಿ ಸದಸ್ಯ ಉಮೇಶ್ ಬೋಳಂತೂರು
ನುಡಿ ನಮನ ಸಲ್ಲಿಸಿದರು. ಉದ್ಯಮಿ ಮೋಹನ್ ಸಾಲ್ಯಾನ್, ಪಾಲುದಾರರಾದ ಯಶೋಧ ಸುಂದರ ಸಾಲ್ಯಾನ್, ಸಜನ್ ಸಾಲ್ಯಾನ್, ಸಚಿನ್ ಸಾಲ್ಯಾನ್, ನಿವೃತ್ತ ಬ್ಯಾಂಕ್ ಮೆನೇಜರ್ ವಿಠಲ ಶೆಟ್ಟಿ ಬೆಂಗಳೂರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ. ಪದ್ಮಶೇಖರ್ ಜೈನ್, ಸುಮಂಗಲಾ ಕ್ರೆಡಿಟ್ ಸೊಸೈಟಿ ಮಾಜಿ ಅಧ್ಯಕ್ಷ ವಿಶ್ವನಾಥ್ ಎಸ್. ಬಿ. ಸಿ. ರೋಡು, ನಿರ್ದೇಶಕ ಭುವನೇಶ್ ಮೊಗರ್ನಾಡು, ಬಿಜೆಪಿ ಮುಖಂಡ ವೆಂಕಟೇಶ್ ಕದ್ರಿ, ಪುರಸಭಾ ಸದಸ್ಯ ಜಗದೀಶ್ ಕುಂದರ್, ಸತ್ಯದೇವತಾ ಟ್ರಸ್ಟ್ ಅಧ್ಯಕ್ಷ ನಿತ್ಯಾನಂದ ಪುಟ್ರೋಟಿ ಬೈಲು, ಗ್ರಾ. ಪಂ. ಸದಸ್ಯ ರಮಾನಂದ ಬೆದ್ರಕಾಡು, ಉದ್ಯಮಿ ರಾಜೇಶ್ ಮೆಲ್ಕಾರ್ ಮತ್ತಿತರರು ಇದ್ದರು.
ಸುಮಂಗಲಾ ಕ್ರೆಡಿಟ್ ಸೊಸೈಟಿ ಮಾಜಿ ನಿರ್ದೇಶಕ ಮೋಹನ್ ಕೆ. ಶ್ರೀಯಾನ್ ರಾಯಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here