ಉಡುಪಿ: ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕ ಬ್ರಹ್ಮಾವರ ಮತ್ತು ಉಡುಪಿ ಜಿಲ್ಲಾ ವೇದಿಕೆಯ ಪದಗ್ರಹಣ ಸಮಾರಂಭ ಅ.05 ರಂದು ಉಡುಪಿಯ ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿಯವರು ನಡೆಸಿಕೊಟ್ಟರು, ಸಮಾರಂಭದ ಅಧ್ಯಕ್ಷತೆಯನ್ನು ಆಮಂತ್ರಣ ವೇದಿಕೆ ಉಡುಪಿಯ ಅಧ್ಯಕ್ಷರಾದ ಪುಷ್ಪ ಪ್ರಸಾದ್ ಮತ್ತು ಆಮಂತ್ರಣ ಬ್ರಹ್ಮಾವರ ತಾಲೂಕು ಸುಮಾಕಿರಣ್ ಬಸ್ರೂರ್ ಇವರು ವಹಿಸಿದ್ದರು. ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅಳದಂಗಡಿ ಇವರ ಮಾರ್ಗದರ್ಶನದೊಂದಿಗೆ ಕಾರ್ಯಕ್ರಮವು ಸಾಂಗವಾಗಿ ನೆರವೇರಿತು.
ಆಮಂತ್ರಣ ಉಡುಪಿ ಹಾಗೂ ಬ್ರಹ್ಮಾವರ ಪದಾಧಿಕಾರಿಗಳಾದ, ಪುಷ್ಪ ಪ್ರಸಾದ್, ಚೇಂಪಿ ದಿನೇಶ್, ಮಾಲತಿ ರಮೇಶ್ ಕೆಮ್ಮಣ್ಣು, ಶೋಭಾ ದಿನೇಶ್ ಉದ್ಯಾವರ, ಶಾಲಿನಿ ಕೆಮ್ಮಣ್ಣು, ಆರ್ ಜೆ ಇಂದ್ರ ಸುಮಾಕಿರಣ್, ಮಂಜುನಾಥ್ ಗುಂಡ್ಮಿ, ಮಡಿ ವಿಶ್ವನಾಥ್ ಖಾರ್ವಿ, ಅಮೃತ ಸಂದೀಪ್, ಇವರಿಗೆ ಆಯ್ಕೆ ಪ್ರಮಾಣ ಪತ್ರವನ್ನು ಸಂಸ್ಥಾಪಕರು ನೀಡಿದರು. ವಿವಿಧ ಸ್ಪರ್ಧೆಗಳ ವಿಜೇತರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಯುಗಾದಿ ಬಳಗ ಸಂಸ್ಥಾಪಕ ಶ್ರೀ ನಾಗ್ ಹೊನ್ನಾವರ, ಕಲಾಸರಸ್ವತಿ ಅಕಾಡೆಮಿಯ ಶಿಕ್ಷಕಿ ಆತ್ಮ ಕಮಲೇಶ್ ಅಳದಂಗಡಿ ಭಾಗವಹಿಸಿದ್ದರು. ಹಾಗೂ ಆಮಂತ್ರಣ ವೇದಿಕೆ ರಾಜ್ಯ ಪ್ರತಿನಿಧಿ ಭಾರತಿ ಪರ್ಕಳ, ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ವಿಂಧ್ಯಾ ಎಸ್ ರೈ ಕಡೆ ಶಿವಾಲಯ, ಉಪಾಧ್ಯಕ್ಷೆ ಅನಿತಾ ಶೆಟ್ಟಿ ಮೂಡುಬಿದಿರೆ, ಬೆಳ್ತಂಗಡಿ ವೇದಿಕೆಯ ಅಧ್ಯಕ್ಷೆ ವಿದ್ಯಾಶ್ರೀ ಅಡೂರ್, ದ.ಕ ಜಿಲ್ಲಾ ಪ್ರಭಾರ ಅಧ್ಯಕ್ಷೆ ನಿರೀಕ್ಷಿತಾ ಮಂಗಳೂರು, ಮೂಡುಬಿದಿರೆ ಅಧ್ಯಕ್ಷೆ ಕವಿತಾ ದಿನೇಶ್ ಕಟೀಲು, ಬಂಟ್ವಾಳ ವೇದಿಕೆ ಅಧ್ಯಕ್ಷೆ
ರಶ್ಮಿತಾ ಸುರೇಶ್ ಜೋಗಿಬೆಟ್ಟು, ಮಂಗಳೂರು ಆಮಂತ್ರಣ ವೇದಿಕೆ ಅಧ್ಯಕ್ಷ ಲತೇಶ್ ಪುತ್ರನ್,ಆಮಂತ್ರಣ ಸೇವಾ ಪ್ರತಿಷ್ಠಾನ ಟ್ರಸ್ಟಿ ಅರುಣ್ ಅರುವ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಕಚೇರಿಯ ಕಿರಣ್ ಕುಮಾರ್ ಭಾಗವಹಿಸಿದ್ದರು. ಆಮಂತ್ರಣ ಜಿಲ್ಲಾ ನಿರ್ದೇಶಕರಾ ಶೋಭ ದಿನೇಶ್ ಉದ್ಯಾವರ, ಆರ್.ಜೆ.ಇಂದ್ರ ಕುಂದಾಪುರ, ಮಾಲತಿ ರಮೇಶ್ ಕೆಮ್ಮಣ್ಣು, ಬ್ರಹ್ಮಾವರ ಪದಾಧಿಕಾರಿಗಳಾದ ಮಂಜುನಾಥ್ ಗುಂಡ್ಮಿ, ಮಡಿ ವಿಶ್ವನಾಥ ಖಾರ್ವಿ, ಬಂಟ್ವಾಳ ವೇದಿಕೆಯ ರಾಕೇಶ್ ಪೊಳಲಿ, ಕಲಾಪ್ರತಿಭೆ ತಂಡದ ಪ್ರಕಾಶ್ ಆಚಾರ್ಯ, ವಿಜಯಚಂದ್ರ ಮುಂಡ್ಲಿ, ಧನರಾಜ್ ಆಚಾರ್ಯ ಬೆಳ್ತಂಗಡಿ ಭಾಗವಹಿಸಿದ್ದರು.
ಶಾಂಭವಿ ಪ್ರಾರ್ಥಿಸಿದರು. ಉಡುಪಿ ಜಿಲ್ಲಾ ನಿರ್ದೇಶಕಿ ಅನ್ನಪೂರ್ಣ ಅಂಬಲಪಾಡಿ ಸ್ವಾಗತಿಸಿದರು. ವಿಜಯ ಕುಮಾರ್ ಜೈನ್ ಪ್ರಸ್ತಾವಿಸಿದರು.
ಅಮೃತಾ ಸಂದೀಪ್ ಇವರು ವಂದನಾರ್ಪಣೆಯನ್ನು ನೆರವೇರಿಸಿಕೊಟ್ಟರು. ರಾಷ್ಟ್ರಗೀತೆಯೊಂದಿಗೆ ಸಭಾ ಕಾರ್ಯಕ್ರಮವು ಮುಕ್ತಾಯಗೊಂಡಿತು. ಹೆಸರಾಂತ ನಿರೂಪಕ ಚೇಂಪಿ ದಿನೇಶ್ ಕಾರ್ಯಕ್ರಮ ನಿರೂಪಣೆಗೈದರು.
ನಂತರ ಉಡುಪಿ ಹಾಗೂ ಬ್ರಹ್ಮಾವರ ವೇದಿಕೆಯ ವತಿಯಿಂದ ಫ್ಯಾಶನ್ ಶೋ ಸ್ಪರ್ಧೆ, ಮಕ್ಜಳಿಗಾಗಿ ಚಿತ್ರಬಿಡಿಸುವ ಸ್ಪರ್ಧೆ, ಪಿಕ್ ಅಂಡ್ ಆಕ್ಟ್, ಇತ್ಯಾದಿ ಕಾರ್ಯಕ್ರಮಗಳು ನಡೆದವು. ಸಮಾರಂಭದಲ್ಲಿ ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿಯವರನ್ನು ಹಾಗೂ ಆಮಂತ್ರಣ ಸಂಸ್ಥಾಪಕರಾದ ವಿಜಯ್ ಕುಮಾರ್ ಜೈನ್ , ಸರಿಗಮಪ ಖ್ಯಾತಿಯ ಸಮೀಕ್ಷಾ ಸಾಲಿಗ್ರಾಮ, ಅಂತರರಾಷ್ಟ್ರೀಯ ಯೋಗಪಟು ಕಲಾಶ್ರೀ ತನ್ವಿತಾ, ನೃತ್ಯಪ್ರತಿಭೆ ಮಾನ್ವಿ ಸಾಲಿಗ್ರಾಮ ಇವರನ್ನು ಕಲಾ ಪ್ರತಿಭೆ ತಂಡ ಹಾಗೂ ಆಮಂತ್ರಣ ಉಡುಪಿ ಹಾಗೂ ಬ್ರಹ್ಮಾವರ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.

