ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಮಜಿ ನಿವಾಸಿ ಪದ್ಮನಾಭ ಮೂಲ್ಯ (65) ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಇಂದು ನಿಧನ ಹೊಂದಿದರು.
ಶ್ರೀಯುತರು ಉತ್ತಮ ಕೃಷಿಕರಾಗಿದ್ದು, ಪ್ರಸ್ತುತ ವೀರಕಂಭ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿರುತ್ತಾರೆ. ಶ್ರೀಯುತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.