ಬಂಟ್ವಾಳ ತಾಲೂಕು ಸಹಕಾರ ಭಾರತೀಯ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

0
108

ಕಲ್ಲಡ್ಕ : ಬಂಟ್ವಾಳ ತಾಲೂಕು ಸಹಕಾರ ಭಾರತೀಯ ಸಭೆ ನೇರಳಕಟ್ಟೆ ಸೊಸೈಟಿಯ ಸಭಾಂಗಣದಲ್ಲಿ ದಿನಾಂಕ 15.10.25 ನೇ ಬುಧವಾರ ಜರಗಿತು.

ಸಭೆಯಲ್ಲಿ ರಾಜ್ಯ ಸಹಕಾರ ಭಾರತೀಯ ಪ್ರಧಾನ ಕಾರ್ಯದರ್ಶಿ ನರಸಿಂಹ ಕಾಮತ್, ದ.ಕ ಜಿಲ್ಲಾ ಅಧ್ಯಕ್ಷ ಬಿ ಸುಧಾಕರ ರೈ ಬೋಳಂತೂರು, ದ.ಕ ಜಿಲ್ಲಾ ಮಹಿಳಾ ಪ್ರಮುಖರಾದ ಶ್ರೀಮತಿ ಸುಭದ್ರ ರಾವ್ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಬಂಟ್ವಾಳ ಸಹಕಾರ ಭಾರತೀಯ ನೂತನ ಅಧ್ಯಕ್ಷರಾಗಿ ನೇರಳಕಟ್ಟೆ ಸೊಸೈಟಿಯ ಅಧ್ಯಕ್ಷರಾದ ಪುಷ್ಪರಾಜ ಚೌಟ, ಪ್ರಧಾನ ಕಾರ್ಯದರ್ಶಿಯಾಗಿ ಬಂಟ್ವಾಳ ಸಮಾಜ ಸೇವಾ ಬ್ಯಾಂಕಿನ ನಿರ್ದೇಶಕರಾದ ಅರುಣ್ ಕುಮಾರ್ ಸಜೀಪ, ಹಾಗು ಮಹಿಳಾ ಪ್ರಮುಖರಾಗಿ ಪುದು ಹಾಲು ಸೊಸೈಟಿಯ ನಿರ್ದೇಶಕರಾದ ಶ್ರೀಮತಿ ಶಾಂತಾ ಚೌಟ ರವರನ್ನು ಆಯ್ಕೆ ಮಾಡಲಾಯಿತು.

ರಾಜ್ಯ ಸಹಕಾರ ಭಾರತೀಯ ಪ್ರಧಾನ ಕಾರ್ಯದರ್ಶಿ ನರಸಿಂಹ ಕಾಮತ್, ಸಹಕಾರ ಭಾರತೀಯ ಪದಾಧಿಕಾರಿಗಳ ಜವಾಬ್ದಾರಿ ಹಾಗೂ ಕರ್ತವ್ಯ ಗಳ ಬಗ್ಗೆ ಮಾಹಿತಿ ನೀಡಿದರು.
ವಿಟ್ಲ ಗ್ರಾಮೀಣ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಎಂ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here